ವೈಭವದಿಂದ ನಡೆದ ಮಡಿವಾಳೇಶ್ವರ ರಥೋತ್ಸವ

Madivaleshwara Chariot Festival held with splendor
ಢವಳಗಿಯಲ್ಲಿ ಭಾನುವಾರ ಜರುಗಿದ ಶ್ರೀ ಮಡಿವಾಳೇಶ್ವರರ ರಥೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು.
Published on

ಢವಳಗಿ: ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ 518ನೇ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ ಜರುಗಿತು.

ರಥೋತ್ಸವಕ್ಕೂ ಮುನ್ನ ಢವಳಗಿ ಗ್ರಾಮದ ಮನೋಹರ ಮುಕ್ಕಣ್ಣಪ್ಪ ಕೋರಿ ಅವರ ಮನೆಯಿಂದ ಗುರುಬಸಪ್ಪ ಕೋಣನವರ ಎತ್ತಿನ ಬಂಡಿಯಲ್ಲಿ ತೇರಿನ ಮಿಣಿ(ಹಗ್ಗ) ಮತ್ತು ಬಸಪ್ಪ ವಡವಡಗಿ ಅವರ ಮನೆಯಿಂದ ತೇರಿನ ಅಲಂಕೃತ ರುದ್ರಾ ಹಾರವನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಮಾದಿನಾಳ ಮತ್ತು ತಾರನಾಳ ಗ್ರಾಮಗಳಿಂದ ತೇರಿನ ಕಲಶ ಆಗಮಿಸಿತು. ಹಳ್ಳೂರ ಗ್ರಾಮದಿಂದ ಆಗಮಿಸಿದ ಉತ್ಸವ ಮೂರ್ತಿಯನ್ನು ಬರಮಾಡಿಕೊಂಡು ಪಲ್ಲಕ್ಕಿಯೊಂದಿಗೆ ಗಂಗಸ್ಥಳಕ್ಕೆ ತೆರಳಿ ನಂತರ ದೇವಸ್ಥಾನಕ್ಕೆ ತರಲಾಯಿತು.

ಶ್ರೀ ಕೊಟ್ಟೂರೇಶ್ವರ ಸ್ವಾಮೀಜಿ, ಶ್ರೀ ಹದಿಮೂರನೇ ಹುಚ್ಚೇಶ್ವರ ಸ್ವಾಮಿಗಳು, ಶ್ರೀಮಠದ ಧರ್ಮಾಧಿಕಾರಿ ನಮಠೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net