ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿಯ ಸಾರ್ವತ್ರಿಕ ಚುನಾವಣೆ / ಕರುಡು ಮತದಾರರ ಪಟ್ಟಿ ಪ್ರಕಟಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ವೇಮಗಲ್ ಕುರಗಲ್ ಪಟ್ಟಣಪಂಚಾಯ್ತಿ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಂಬAದಿಸಿದ ವಾರ್ಡ್ ಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎಂ ಆರ್.ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿಯ ಮೊದಲ ಸಾರ್ವತ್ರಿಕ ಚುನಾವಣೆ ಕುರಿತು ಕರಡು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಇತ್ತೀಚಿಗೆ ಹೊಸದಾಗಿ ರಚನೆಯಾದ ವೇಮಗಲ್-ಕುರಗಲ್ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣೆ ಆಯೋಗ ಆದೇಶಿಸಿದ್ದು, ಈ ಆದೇಶದಂತೆ ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿಯ ೧೭ ವಾರ್ಡುಗಳ ೨೨ ಮತಗಟ್ಟೆಗಳಲ್ಲಿ ಸುಮಾರು ೧೩೦೮೫ ಮತದಾರರು ಮತ ಚಲಾವಣೆ ಮಾಡಲು ಅರ್ಹರಿರುತ್ತಾರೆ ಎಂದು ತಿಳಿಸಿದರು.

ಚುನಾವಣಾ ವೇಳಾಪಟ್ಟಿ

ಚುನಾವಣಾ ಅಧಿಸೂಚನೆಯಂತೆ ಜು.೨೯ ರಿಂದ ಆಗಸ್ಟ್ ೫ರ ತನಕ ನಾಮಪತ್ರ ಸಲ್ಲಿಕೆ, ಆಗಸ್ಟ್ ೬ ರಂದು ನಾಮಪತ್ರಗಳ ಪರಿಶೀಲನೆ, ಆಗಸ್ಟ್ ೮ ನಾಮಪತ್ರಗಳ ವಾಪಸ್ಸಾತಿಗೆ ಕಡೇದಿನ, ಆಗಸ್ಟ್ ೧೭ಕ್ಕೆ ಮತದಾನ ಮತ್ತು ಆಗಸ್ಟ್ ೨೦ ರಂದು ಮತ ಎಣಿಕೆ, ಜುಲೈ ೨೯ ಆಗಸ್ಟ್ ೨೬ರ ವರೆಗೂ ನೀತಿ ಸಂಹಿತಿ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೩ : ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆ ಕುರಿತು ಕರುಡು ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ರಾಜಕೀಯ ಪಕ್ಷಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net