

ಚಿತ್ರದುರ್ಗ: ಮಾಸಿಕ ವೇತನವನ್ನು ಆರು ಸಾವಿರ ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ಬಿಸಿಯೂಟ ತಯಾರಕರು ರಾಜ್ಯಸರ್ಕಾರವನ್ನು ಒತ್ತಾಯಿಸಿ ನಗರ ದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟಿಸಿದ ಬಿಸಿಯೂಟ ತಯಾರಕರು ಪ್ರವಾಸಿ ಮಂದಿರದಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯವಿಧಾನಸಭಾ ಚುನಾವಣೆ ಸಂ ದರ್ಭ ಖಾನಾಪುರದಲ್ಲಿ ಎಐಟಿಯುಸಿ ನಾಯಕರು ಚರ್ಚೆ ನಡೆಸಿದ್ದ ವೇಳೆ, ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಪ್ರಿಯಾಂಕ ಗಾಂಧಿ ಅವರು 6ನೇ ಗ್ಯಾರಂಟಿಯಾಗಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವ ಭರವಸೆ ನೀಡಿದ್ದರು. ಬೆಳಗಾವಿಯಲ್ಲಿ ನಡೆಸಿದ್ದ ಪಕ್ಷದ ಪ್ರಚಾರ ಕಾರ‌್ಯಕ್ರಮದಲ್ಲೂ ತಮ್ಮ ಈ ಭರವಸೆಯನ್ನು ಪ್ರಿಯಾಂಕಗಾಂಧಿ ಪ್ರಕಟಿಸಿದ್ದರು. ಆದ್ದರಿಂದ ಬಜೆಟ್‌ನಲ್ಲಿ ವೇತನ ಹೆಚ್ಚಿಸುವಂತೆ ಪ್ರತಿಭ ಟನಕಾರರು ರಾಜ್ಯಸರ್ಕಾರವನ್ನು ಆಗ್ರಹಿಸಿದರು.
ಫೆಡರೇಷನ್ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ,ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸುರೇಶ್‌ಬಾಬು,ದೊಡ್ಡಉಳ್ಳಾರ್ತಿ ಕ ರಿಯಣ್ಣ,ಸತ್ಯಕೀರ್ತಿ, ಎಂ.ಬಿ.ಜಯದೇವಮೂರ್ತಿ,ಚೇತನ್,ವಸಂತಬಾಯಿ,ರತ್ನಮ್ಮ,ಗಾಯಿತ್ರಮ್ಮ,ಮಂಗಳಮ್ಮ,ರಜಿಯಾಬೇಗಂ,ಗೌರ ಮ್ಮ,ರೇಣುಕಾ, ವನಜಾಕ್ಷಮ್ಮ, ಸರೋಜಮ್ಮ,ಸೀತಾಲಕ್ಷ್ಮೀ,ಮಂಗಳ ಗೌರಮ್ಮ,ಸುಶೀಲಮ್ಮ,ಶಾಂತಮ್ಮ,ತಿಪ್ಪಮ್ಮ,ಪುಷ್ಪಲತಾ,ದಾಕ್ಷಾಯಣ ಮ್ಮ,ಶಾಂತಮ್ಮ ಇತರರು ಪ್ರತಿಭಟನೆಯಲ್ಲಿ ಇದ್ದರು.