

ವೇಗವಾಗಿ ಸೈಕಲ್ ತುಳಿಯುವಲ್ಲಿ ಯಶಸ್ವಿಯಾದ ವಿಜಯಪುರ ಜಿಲ್ಲಾ ಸ್ಪರ್ಧಿಗಳು 15ನೇ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ‘ತಂಡ ಸಮಗ್ರ’ ಪ್ರಶಸ್ತಿ ಪಡೆದರು.
ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಭಾನುವಾರ ಮುಕ್ತಾಯಗೊಂಡ ಸ್ಪರ್ಧೆಯಲ್ಲಿ ಒಟ್ಟು 20 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದರು. 16 ಅಂಕಗಳಿಂದ ಬಾಗಲಕೋಟೆ ಜಿಲ್ಲೆ ಸ್ಪರ್ಧಿಗಳು ದ್ವಿತೀಯ ಸ್ಥಾನ ಪಡೆದರು.
14 ವರ್ಷದೊಳಗಿನ 10 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್ ಬಾಲಕರ ವಿಭಾಗದಲ್ಲಿ ಬಾಗಲಕೋಟೆಯ ಸಂಗಮೇಶ ತೋಳಮಟ್ಟಿ(ಪ್ರಥಮ), ಬೆಳಗಾವಿಯ ವೀರೇಶ(ದ್ವಿತೀಯ), ಗದಗಿನ ನಿಖಿಲ ರೆಡ್ಡಿ ತೇರಿನಗಡ್ಡಿ(ತೃತೀಯ), ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆಯ ಪೂರ್ವಿ ಸಿದ್ದವ್ವಗೋಳ(ಪ್ರ), ವಿಜಯಪುರದ ಕರಿಶ್ಮಾ ತಟಗಾರ(ದ್ವಿ), ಬಾಗಲಕೋಟೆಯ ನಂದಿನಿ ಲಮಾಣಿ(ತೃ) ಬಹುಮಾನ ಪಡೆದರು.
16 ವರ್ಷದೊಳಗಿನ 10 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಜ್ಯೋತಿ ರಾಠೋಡ(ಪ್ರ), ಕೋಕಿಲಾ ಚವ್ಹಾಣ(ದ್ವಿ), ದೀಪಿಕಾ ಪಡತಾರೆ(ತೃ), 16 ವರ್ಷದೊಳಗಿನ 15 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್ ಬಾಲಕರ ವಿಭಾಗದಲ್ಲಿ ಚಂದಗಿರಿ ಯಲ್ಲೇಶ ಹುಡೇದ(ಪ್ರ), ಹೊನ್ನಪ್ಪ ಧರ್ಮಟ್ಟಿ(ದ್ವಿ), ಬಾಗಲಕೋಟೆಯ ತರುಣ ನಾಯಕ(ತೃ) ಬಹುಮಾನ ಪಡೆದರು.
18 ವರ್ಷದೊಳಗಿನ ಬಾಲಕರ 20 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ವಿಜಯಪುರದ ಸುಜಲ್ ಜಾಧವ(ಪ್ರ), ಶ್ರೀನಿವಾಸ ರಜಪೂತ(ದ್ವಿ), ಬಾಗಲಕೋಟೆಯ ಮಲ್ಲಿಕಾರ್ಜುನ ಶಿರೋಳ(ತೃ), 18 ವರ್ಷದೊಳಗಿನ ಬಾಲಕಿಯರ 15 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ಬಾಗಲಕೋಟೆಯ ಅನುಪಮಾ ಗುಳೇದ(ಪ್ರ), ವಿಜಯಪುರದ ಪಾಯಲ ಚವ್ಹಾಣ(ದ್ವಿ), ಬಾಗಲಕೋಟೆಯ ಕೀರ್ತಿ ನಾಯಕ(ತೃ) ಬಹುಮಾನ ಪಡೆದರು.
ಮಹಿಳೆಯರ 20 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ಬಾಗಲಕೋಟೆಯ ನಂದಾ(ಪ್ರ), ದಾನಮ್ಮ ಗುರವ(ತೃ), ಸವಿತಾ ಅಡಗಲ್(ತೃ), 23 ವರ್ಷದೊಳಗಿನ ಯುವಕರ 30 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ಧಾರವಾಡದ ಸ್ವಯಂ ಎಂ. ಕಠಾರೆ(ಪ್ರ), ಬೆಂಗಳೂರಿನ ನೀಲವೇರ್ ಡಿಸೋಜಾ(ದ್ವಿ), ಬೆಳಗಾವಿಯ ರಾಹುಲ್(ತೃ), ಪುರುಷರ 30 ಕಿ.ಮೀ.ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ವಿಜಯಪುರದ ಶ್ರೀಶೈಲ ವೀರಾಪೂರ(ಪ್ರ), ರಾಹುಲ್ ರಾಠೋಡ(ದ್ವಿ), ಬೆಂಗಳೂರಿನ ಸೌರಭ ಸಿಂಗ್(ತೃ) ಪ್ರಶಸ್ತಿ ಪಡೆದರು.