

ರಾವಂದೂರು: ಪಿರಿಯಾಪಟ್ಟಣ ಕ್ಷೇತ್ರದ ನೂತನ ಶಾಸಕ ಕೆ.ವೆಂಕಟೇಶ್‌ಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂದು ಮೈಸೂರು ಜಿಲ್ಲಾ ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ತಾಲೂಕು ಅಧ್ಯಕ್ಷ ಕೆ.ಆರ್.ಸೋಮಶೇಖರ್ ಕೋರಿದರು.
ಕುಂಬಾರ ಸಂಘದ ವತಿಯಿಂದ ಗುರುವಾರ ನೂತನ ಶಾಸಕ ಕೆ.ವೆಂಟೇಶ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಸಿದ್ದರಾಮಯ್ಯರ ಆಪ್ತ ಸ್ನೇಹಿತರಾಗಿರುವ ವೆಂಕಟೇಶ್ ಸಚಿವರಾಗಿ ಹಾಗೂ ಬಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಜಿಲ್ಲೆಯ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ಇವರಿಗೆ ಈ ಬಾರಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು. ತಾಲೂಕು ಕುಂಬಾರರ ಸಂಘದ ಗೌರವಾಧ್ಯಕ್ಷ ಆರ್.ಮಹೇಶ್ ಇತರರು ಹಾಜರಿದ್ದರು.