

ಹಾಸನ: ಅಪರಿಚಿತ ಮಹಿಳೆಯರಿಬ್ಬರು ವೃದ್ಧೆಯ ಬಳಿ ಇದ್ದ 50 ಸಾವಿರ ನಗದವನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಅರಕಲಗೂಡು ತಾಲೂಕು ಕಸಬಾ ಹೋಬಳಿ ನೈಗೆರೆ ಗ್ರಾಮದ 70ವರ್ಷ ವಯಸ್ಸಿನ ಲಕ್ಷ್ಮಮ್ಮ ಅವರು ಜು.28ರಂದು ಅರಕಲಗೂಡು ಪಟ್ಟಣದ ಬ್ಯಾಂಕಿಗೆ 50 ಸಾವಿರ ರೂ. ಹಣ ಇಡಲು ಬಂದಿದ್ದರು. ಈ ವೇಳೆ ಮ್ಯಾನೇಜರ್ ವೃದ್ಧೆಗೆ ನಿಮ್ಮ ಅಕೌಂಟ್ ಲ್ಯಾಪ್ಸ್ ಆಗಿದೆ. ಸೋಮವಾರ ಬನ್ನಿ ಎಂದು ತಿಳಿಸಿದ್ದಾರೆ. ವೃದ್ಧೆ ಬ್ಯಾಂಕ್‌ನಿಂದ ಹೊರಗೆ ಬಂದಾಗ ಇಬ್ಬರು ಅಪರಿಚಿತ ಹೆಂಗಸರು ಬಂದು ವೃದ್ಧೆ ಮಾತನಾಡಿಸಿ ಅವರಿಗೆ ಗೊತ್ತಾಗದ ಹಾಗೆ 50 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ. ಬಳಿಕ ವೃದ್ಧೆ ಮನೆಗೆ ಹೋಗಿ ನೋಡಿದಾಗ ಹಣ ಕಳುವಾಗಿರುವುದು ತಿಳಿದುಬಂದಿದೆ. ಹಣ ಕಳ್ಳತನ ಮಾಡಿದ ಮಹಿಳೆಯರನ್ನು ಪತ್ತೆ ಮಾಡಿ ಹಣ ಹಿಂದಿರುಗಿಸಿ ಕೊಡಬೇಕು ಎಂದು ವೃದ್ಧೆ ಜು.30ರಂದು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.