ವೀರೇಂದ್ರ ಹೆಗ್ಗಡೆಗೆ ನೋಬೆಲ್ ಪ್ರಶಸ್ತಿ ನೀಡಿ

7 mdg 1 darmastala
ಮೂಡಿಗೆರೆ ತಾಲೂಕು ಬಿಳಗುಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನವೀಕೃತ ಕೆರೆಯನ್ನು ಶಾಸಕಿ ನಯನಾ ಮೋಟಮ್ಮ ಗ್ರಾಪಂ ಅಧ್ಯಕ್ಷೆ ನಜ್ಮಾ ಬೇಗಂ ಸುಪರ್ದಿಗೆ ಒಪ್ಪಿಸಿದರು. ಎಸ್.ಅಶ್ವಿನಿ, ಪ್ರಶಾಂತ್, ಸದಾನಂದ ಬಂಗೇರ, ಸುಧೀರ್ ಜೈನ್, ಎಚ್.ಎಲ್.ಪ್ರಶಾಂತ್, ಸುಧಾ ಮಂಜುನಾಥ್, ಖಲೀಮುಲ್ಲಾ, ಶಿವಣ್ಣ, ಪ್ರಜಾವತಿ, ಸೌಮ್ಯಾ ಇತರರಿದ್ದರು.
Published on

ಮೂಡಿಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಜನರಿಗೆ ಮೂಲಸೌಕರ್ಯ ಸುಲಭವಾಗಿ ದೊರೆಯುವ ಜತೆಗೆ ರೈತರಿಗೂ ನೀರಾವರಿ ನೆರವು ಸಿಗುತ್ತಿದೆ. ಇದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ. ಧರ್ಮಸ್ಥಳದಿಂದ ನಡೆಯುವ ಅಭಿವೃದ್ಧಿ ಕಾರ್ಯಗಳ ಎಲ್ಲ ಅಂಶಗಳನ್ನು ಪರಿಗಣಿಸಿ ವೀರೇಂದ್ರ ಹೆಗ್ಗಡೆ ಅವರನ್ನು ನೋಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸದಸ್ಯ ಚಿಪ್ರಗುತ್ತಿ ಪ್ರಶಾಂತ್ ಒತ್ತಾಯಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ಥಳೀಯರ ನೆರವಿನಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯಲ್ಲಿ ಬಿಳಗುಳ ಗ್ರಾಮದಲ್ಲಿ ಅಭಿವೃದ್ಧಿಪಡಿಸಿದ ಕೆರೆಯನ್ನು ಹೆಸಗಲ್ ಗ್ರಾಪಂಗೆ ಒಪ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾವಿರಾರು ಮದ್ಯವರ್ಜನ ಶಿಬಿರಗಳು ನಡೆದಿವೆ. ಲಕ್ಷಾಂತರ ಮಂದಿ ಕುಡಿತದ ಚಟದಿಂದ ದೂರವಾಗಿದ್ದಾರೆ. ಪ್ರತಿ ವರ್ಷ ನೂರಾರು ಮನೆಗಳನ್ನು ಬಡವರಿಗೆ ನಿರ್ಮಿಸಿ ಕೊಡಲಾಗುತ್ತಿದೆ. ರಾಜ್ಯದಲ್ಲಿ ಪಾಳು ಬಿದ್ದಿರುವ 825 ಕೆರೆಗಳಿಗೆ ಹೂಳೆತ್ತುವ ಮೂಲಕ ಅಭಿವೃದ್ಧಿಪಡಿಸಿ ಮರುಜೀವ ನೀಡಿದ್ದರಿಂದ ರೈತರ ಮತ್ತು ಜನರ ಬದುಕು ಹಸನಾಗಿದೆ. ಇಂತಹ ಹಲವಾರು ರೀತಿಯ ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಂದಾಗಿ ವೀರೇಂದ್ರ ಹೆಗ್ಗಡೆ ಅವರು ದೇಶದ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಶಾಸಕಿ ನಯನಾ ಮೋಟಮ್ಮ ಅವರು ಅಭಿವೃದ್ಧಿಯಾದ ಕೆರೆಯನ್ನು ಗ್ರಾಪಂ ಅಧ್ಯಕ್ಷೆ ನಜ್ಮಾ ಬೇಗಂ ಅವರ ಸುಪರ್ದಿಗೆ ಒಪ್ಪಿಸಿದರು. ತಹಸೀಲ್ದಾರ್ ಎಸ್.ಅಶ್ವಿನಿ, ಗ್ರಾಪಂ ಸದಸ್ಯರಾದ ಸುಧಾ ಮಂಜುನಾಥ್, ಖಲೀಮುಲ್ಲಾ, ಪ್ರಜಾವತಿ, ಶಿವಣ್ಣ, ಪಿಡಿಒ ಸೌಮ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಯೋಜನಾ ನಿರ್ದೇಶಕ ಸುಧೀರ್ ಜೈನ್, ಮುಖಂಡರಾದ ಅಹಮದ್, ಚಂದ್ರು ಒಡೆಯರ್, ಸಂಪತ್‌ಕುಮಾರ್, ಸಿ.ಬಿ.ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net