ವೀರ ಸಾವರ್ಕರ್ ವಿಚಾರವಾಗಿ ರಾಜಕೀಯ ಬೇಡ

Savarkar
Published on

ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಸ್ವಾತಂತ್ರೃ ಹೋರಾಟಗಾರ ವೀರ್ ಸಾವರ್ಕರ್ ಜಯಂತಿ ಪ್ರಯುಕ್ತ ಗುರುವಾರ ರಕ್ತದಾನ ಶಿಬಿರ ನಡೆಯಿತು. 40 ಜನ ದೇಶಪ್ರೇಮಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಬಿಜೆಪಿ ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ವಿಚಾರವಾಗಿ ರಾಜಕೀಯ ಬೆರೆಸಬಾರದು. ಇತ್ತೀಚೆಗಷ್ಟೇ ಸುಪ್ರಿಂಕೋರ್ಟ್ ಕೂಡ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ಇದರ ನಡುವೆ ಅನೇಕ ಯುವಕರು ಇಂದಿಗೂ ಸಾವರ್ಕರ್ ಹೆಸರಿನಲ್ಲಿ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಮೇಯರ್ ಸಂದೇಶಸ್ವಾಮಿ ಮಾತನಾಡಿ, ಸಾವರ್ಕರ್ ವಿಚಾರಗಳನ್ನು ಇಂದಿನ ಯುವಕರು ಓದಬೇಕು. ಸಾವರ್ಕರ್ ಬಗ್ಗೆ ರಾಜಕೀಯ ಕಾರಣಗಳಿಂದ ಅಪಪ್ರಚಾರಗಳಾಗುತ್ತಿದ್ದು, ಜನರೇ ಇಂತಹ ಸೇವಾ ಕಾರ್ಯಕ್ರಮಗಳ ಮೂಲಕ ಸೂಕ್ತ ಉತ್ತರ ನೀಡಬೇಕಿದೆ ಎಂದರು.

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್‌ಭಟ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಾಗಮಣಿ, ಶಿವು ಪಟೇಲ್, ಸುಚೇಂದ್ರ, ಮೀರ್ಲೆ ಪನೀಶ್, ಸುರೇಶ್, ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net