ಚಿತ್ರದುರ್ಗ:ನಗರದ ಶ್ರೀ ಕಬೀರಾನಂದ ಸಂಸ್ಕೃತ ಪಾಠಶಾಲೆಯಿಂದ ವಿಶ್ವ ಸಂಸ್ಕೃತ ದಿನೋತ್ಸವದ ಅಂಗವಾಗಿ ನಗರದಲ್ಲಿ ಜಾಥಾ ಏರ್ಪಡಿಸಲಾಗಿತ್ತು. ಶಾಲೆಯಿಂದ ಆರಂಭವಾದ ಜಾಥಾ ಫಿಲ್ಟರ್‌ಹೌಸ್,ಏಕನಾಥೇಶ್ವರಿ ಪಾದಗುಡಿ,ದೊಡ್ಡಪೇಟೆ ಶ್ರೀ ಉಚ್ಚಂಗಿ ಯ ಲ್ಲಮ್ಮ ದೇವಾಲಯ ದೊಡ್ಡಪೇಟೆ,ರಂಗಯ್ಯನ ಬಾಗಿಲು,ಉಜ್ಜನಿಮಠ,ಕರುವಿನ ಕಟ್ಟೆ ವೃತ್ತದ ಮೂಲಕ ಕಬೀರಾನಂದಾಶ್ರಮದ ಬಳಿ ಮುಕ್ತಾಯಗೊಂಡಿತು. ಸಂಸ್ಕೃತ ಶಾಲೆ ಮುಖ್ಯಶಿಕ್ಷಕ ಗಣಪತಿಶಾಸ್ತ್ರಿ,ಶಿಕ್ಷಕರಾದ ಪಿ.ಕೆ. ಸುಮನಾ,ಆರ್.ಹೇಮಾವತಿ,ಸುಬ್ರಾರಾಯ್‌ಭ ಟ್,ಮಂಜುನಾಥ್ ಮತ್ತಿತರರು ಇದ್ದರು. ಸಂಸ್ಕೃತ ಕಲಿಕೆಯ ಮಹತ್ವವನ್ನು ಸಾರುವ ಭಿತ್ತಿಪತ್ರಗಳೊಂದಿಗೆ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.