ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

 ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ನಂಜನಗೂಡಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ್, ಕುಮಾರ್ ಕಳಲೆ, ಸೋಮಣ್ಣ ಬಿಳಿಗೆರೆ, ಕೃಷ್ಣ ಮಲ್ಕುಂಡಿ, ಚಿಕ್ಕಣ್ಣ ಹುಲ್ಲಹಳ್ಳಿ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ನಂಜನಗೂಡಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ್, ಕುಮಾರ್ ಕಳಲೆ, ಸೋಮಣ್ಣ ಬಿಳಿಗೆರೆ, ಕೃಷ್ಣ ಮಲ್ಕುಂಡಿ, ಚಿಕ್ಕಣ್ಣ ಹುಲ್ಲಹಳ್ಳಿ ಇತರರಿದ್ದರು.
Published on

ನಂಜನಗೂಡು: ಶೋಷಿತ ಸಮುದಾಯದ ಜನರಿಗೆ ಭೂಮಿ, ವಾಸಿಸಲು ಮನೆ, ನಿವೇಶನ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬೆಳಗ್ಗೆ 11ರಂದು ಸುಮಾರು ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಮಾತನಾಡಿ, ಸರಕಾರ ಹಾಗೂ ಅಧಿಕಾರಿಗಳು ಜಡ್ಡುಗಟ್ಟಿದ ಸ್ಥಿತಿಯಲ್ಲಿದ್ದಾರೆ. ನಾಗರಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಳಜಿ ತೋರಿಸುತ್ತಿಲ್ಲ. ಇದರಿಂದಾಗಿ ಜನರು ಸಂಕಷ್ಟದಲ್ಲೆ ಬದುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ದಸಂಸದಿಂದ ಸೆಪ್ಟೆಂಬರ್ 20ರಿಂದ 30ರವರೆಗೆ ರಾಜ್ಯದಾದ್ಯಂತ ನಿರಂತರ ಚಳವಳಿ ರೂಪಿಸಲಾಗಿದ್ದು, ನಾಗರಿಕರಿಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ದಲಿತರ ಮೇಲಿನ ದಬ್ಬಾಳಿಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ತಮ್ಮ ಅಹವಾಲು ಸಲ್ಲಿಸಿ ಪ್ರತಿಭಟನೆ ಕೊನೆಗೊಳಿಸಿದರು. ದಸಂಸ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ತಾಲೂಕು ಸಂಯೋಜಕ ಕುಮಾರ್ ಕಳಲೆ, ಸೋಮಣ್ಣ ಬಿಳಿಗೆರೆ, ಕೃಷ್ಣ ಮಲ್ಕುಂಡಿ, ಚಿಕ್ಕಣ್ಣ ಹುಲ್ಲಹಳ್ಳಿ, ರವಿ ಕೆರೆಹುಂಡಿ, ಸಿದ್ದರಾಜು ಕಳಲೆ, ಜ್ಯೋತಿ ಪ್ರಕಾಶ್, ರಾಜಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net