ಒಟ್ಟು 346 82 428
ವಿಮಾನನಿಲ್ದಾಣ ಮಾರ್ಗ 299 61 360
ಹೊರವರ್ತುಲ ಮಾರ್ಗ 47 21 68
ಮಾರ್ಗ ಖಾಸಗಿ ಸರ್ಕಾರಿ ಒಟ್ಟು
ಆಸ್ತಿ ಸ್ವಾಧಿನ ವಿವರ:
ವಿಮಾನನಿಲ್ದಾಣ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ ನೆರವು ನೀಡುತ್ತಿದೆ. ಕೆ.ಆರ್.ಪುರದಿಂದ ವಿಮಾನನಿಲ್ದಾಣವರೆಗಿನ ಮಾರ್ಗದಲ್ಲಿನ ಕೊನೆಯ 5 ಕಿ.ಮೀ. ಮಾರ್ಗ ಹಾಗೂ ನಿಲ್ದಾಣಗಳನ್ನು ಬಿಐಎಎಲ್ ನಿಮಿರ್ಸಿಕೊಡಲಿದೆ. ಅದಕ್ಕೆ 800 ಕೋಟಿ ರೂ.ಗೂ ಹೆಚ್ಚಿನ ವೆಚ್ಚವಾಗಲಿದೆ.
ಬಿಐಎಎಲ್ ನೆರವು:
ಈ ಮಾರ್ಗದಲ್ಲಿನ ಆಸ್ತಿಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿದ್ದ ಒಳಚರಂಡಿ, ಬೆಸ್ಕಾಂ ವಿದ್ಯುತ್ ತಂತಿ ಸೇರಿ ಇನ್ನಿತರ ಯುಟಿಲಿಟಿಗಳ ಸ್ಥಳಾಂತರ ಮಾಡಲಾಗುತ್ತಿದೆ. ಆಸ್ತಿ ಸ್ವಾಧಿನ ರ್ಪೂಣ ಪ್ರಮಾಣದಲ್ಲಿ ಆಗುವುದಕ್ಕೆ ಮುನ್ನವೇ ಈ ಕೆಲಸ ಶುರು ಮಾಡಲಾಗಿದ್ದು, ಮಾರ್ಗ ನಿರ್ಮಾಣ ಕಾಮಗಾರಿಗೆ ವೇಗ ನೀಡಲು ಸಹಕಾರಿಯಾಗಲಿದೆ.
ಯುಟಿಲಿಟಿ ಸ್ಥಾಳಾಂತರ:
ವಿಮಾನನಿಲ್ದಾಣಕ್ಕೆ ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರ ಹಾಗೂ ಕೆ.ಆರ್.ಪುರದಿಂದ ವಿಮಾನನಿಲ್ದಾಣಕ್ಕೆ ಮಾರ್ಗ ನಿಮಿರ್ಸಲಾಗುತ್ತಿದೆ. ಈ ಯೋಜನೆಗೆ ಬಿಎಂಆರ್ಸಿಎಲ್ 2ಎ ಮತ್ತು 2ಬಿ ಎಂಬ ಹೆಸರಿಟ್ಟಿದೆ. ಎರಡೂ ಮಾರ್ಗಗಳಲ್ಲಿ ಒಟ್ಟು 428 ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅವಶ್ಯಕತೆಯಿತ್ತು. ಅದರಂತೆ ಎಲ್ಲ ಆಸ್ತಿಗಳನ್ನು ಈಗಾಗಲೆ ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾಮಗಾರಿ ನಡೆಸಬೇಕಿದೆ.
428 ಆಸ್ತಿಗಳು:
ನಗರ ಸಾರಿಗೆ ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮೆಟ್ರೋ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೆ 42 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಿದೆ. ಅದರ ಜತೆಗೆ 2ನೇ ಹಂತದಲ್ಲಿ 72 ಕಿ.ಮೀ. ಉದ್ದದ ಮಾರ್ಗ ನಿಮಿರ್ಸಲಾಗುತ್ತಿದೆ. ಅದರ ಜತೆಗೆ ವಿಮಾನನಿಲ್ದಾಣಕ್ಕೆ ಸಂಪಕಿರ್ಸುವಂತೆ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಆ ಮಾರ್ಗಕ್ಕೆ ಸಂಬಂಧಿಸಿದ ಭೂಸ್ವಾಧಿನ ಪ್ರಕ್ರಿಯೆ ರ್ಪೂಣಗೊಂಡಿದ್ದು, ಕಾಮಗಾರಿಗೆ ಎದುರಾಗಬಹುದಾಗಿದ್ದ ಸಮಸ್ಯೆಗಳೆಲ್ಲ ನಿವಾರಣೆಯಾಗಿದೆ.
ಬೆಂಗಳೂರು:ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿನ ಹೊರವರ್ತುಲ ಮತ್ತು ವಿಮಾನನಿಲ್ದಾಣ ಮಾರ್ಗಗಳಲ್ಲಿ ಅಗತ್ಯವಿದ್ದ ಭೂಸ್ವಾಧಿನ ಪ್ರಕ್ರಿಯೆ ರ್ಪೂಣಗೊಂಡಿದೆ. ಆಮೂಲಕ ಕಾಮಗಾರಿಗೆ ಯಾವುದೇ ತಡೆಯಿಲ್ಲದಂತಾಗಿದೆ.