ವಿಭಜನೆ ಪೂರ್ವ ಧಾರವಾಡ ಜಿಲ್ಲೆಯಲ್ಲಿ ೩ ಜವಳಿ ಪಾರ್ಕ್ ಗಳು : ನವಲಗುಂದ, ರಾಣೆಬೆನ್ನೂರಿನಲ್ಲಿ ಸ್ಥಳ ಪರಿಶೀಲನೆ

Published on

ಹುಬ್ಬಳ್ಳಿ; ಕೈಮಗ್ಗ, ಜವಳಿ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವ ಕ್ಷೇತ್ರ ನವಲಗುಂದದಲ್ಲಿ ಜವಳಿ ಪಾರ್ಕ್ ಪ್ರಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಕಳೆದ ವಾರವಷ್ಟೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ಜವಳಿ ಪಾರ್ಕ್ ಪ್ರಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿಯೂ ಜವಳಿ ಪಾರ್ಕ್ ನಿರ್ಮಾಣ ಗೊಳ್ಳಲಿದೆ. ನವಲಗುಂದ ಹಾಗೂ ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಸಳ ಪರಿಶೀಲಿಸಲಾಗುತ್ತಿದೆ. ವಿಭಜನೆ ಪೂರ್ವ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಮೂರು ಜವಳಿ ಪಾರ್ಕ್ ಗಳು ನಿರ್ಮಾಣವಾದಂತಾಗುತ್ತವೆ. ಇದರಿಂದ ಸಾವಿರಾರು ಪರೋಕ್ಷ ಮತ್ತು ಅಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net