

ಮೈಸೂರು: ವಿಧಾನಸಭೆ ಚುನಾವಣೆಯ ಸಂದರ್ಭ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 5 ರೌಡಿಗಳನ್ನು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜು ಬುಧವಾರ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಜೆಪಿ ನಗರ ಮಹದೇವಪುರದ ನರ್ಮ್ ಅಪಾರ್ಟ್‌ಮೆಂಟ್‌ನ 1ನೇ ಬ್ಲಾಕ್ ನಿವಾಸಿ ಯಶವಂತ್, ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಬೆಲವತ್ತ 1ನೇ ಹಂತದ ನಿವಾಸಿ ಸುಭಾನ್, ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ದಿವಾನ್ಸ್ ರಸ್ತೆಯ 3ನೇ ಮೇನ್ ನಿವಾಸಿ ಕೃಷ್ಣ, ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ನಗರ 2ನೇ ಹಂತದ ಸೈಯ್ಯದ್ ಅಯೂಬ್ ಹಾಗೂ ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಸೇಠ್ ಬ್ಲಾಕ್ ನಿವಾಸಿ ತೌಸೀಫ್ ಅವರನ್ನು ಗಡಿಪಾರು ಮಾಡಲಾಗಿದೆ.