ವಿದ್ವಾಂಸರಿಂದ ಪ್ರವಚನ ನಾಳೆಯಿಂದ

ram temple
Published on


ಮೈಸೂರು: ನಗರದ ಅಗ್ರಹಾರ, ಖಿಲ್ಲೆ ಮೊಹಲ್ಲಾದ ಶ್ರೀ ಉತ್ತರಾದಿ ಮಠದಲ್ಲಿ ಶ್ರೀ ಧನ್ವಂತರಿ ಪ್ರತಿಷ್ಠಾಪನಾ ತೃತೀಯ ವಾರ್ಷಿಕೋತ್ಸವದ ನಿಮಿತ್ತ ಜೂ.12ರಿಂದ 14ರವರೆಗೆ ಸಂಜೆ 6ರಿಂದ 6.30ರವರೆಗೆ ವಿದ್ವಾಂಸರಿಂದ ಪ್ರವಚನ ಆಯೋಜಿಸಲಾಗಿದೆ. ಸಂಜೆ 6.30ರಿಂದ 7.30ರವರೆಗೆ ಮಂತ್ರಾಲಯ ಮಠ (ಭುವನಗಿರಿ ಆಶ್ರಮ)ದ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಧನ್ವಂತರಿ ಪ್ರಾದುರ್ಭಾವದ ವಿಷಯ ಕುರಿತು ವಿಶೇಷ ಪ್ರವಚನವನ್ನು ಆಯೋಜಿಸಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಠದ ಪ್ರಧಾನ ವ್ಯವಸ್ಥಾಪಕ ಪಂಡಿತ್ ಅನಿರುದ್ಧಾಚಾರ್ಯ ಪಾಂಡುರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊ.9448147459 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net