ವಿದ್ಯುತ್‌ಗಾಗಿ ಒಂಟಿ ಕಾಲಲ್ಲಿ ನಿಂತು ಪ್ರತಿಭಟಿಸಿದ್ವಿ: ಸಚಿವ ಆರಗ ಜ್ಞಾನೇಂದ್ರ

Araga Gnanendra
Published on

ಶಿವಮೊಗ್ಗ: ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇದ್ದಿದ್ದಕ್ಕೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಶಾಸಕರಾಗಿದ್ದ ನಾನು ಮತ್ತು ಆಯನೂರು ಮಂಜುನಾಥ ಸದನದಲ್ಲೇ ಒಂಟಿ ಕಾಲಲ್ಲಿ ನಿಂತು ಪ್ರತಿಭಟಿಸಿದ್ವಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಮರಿಸಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ ಃ2047 ಮಹೋತ್ಸವದಲ್ಲಿ ಮಾತನಾಡಿದ ಅವರು, 1993ರಲ್ಲಿ ಕೇಂದ್ರ ಸರ್ಕಾರ ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿ ಮಾಡಿತ್ತು. ಆದರೆ ಮೂರ್ನಾಲ್ಕು ವರ್ಷ ಕಳೆದರೂ ಯೋಜನೆ ಜಾರಿಗೊಳ್ಳಲಿಲ್ಲ. 1996ರಲ್ಲಿ ಜೆ.ಎಚ್.ಪಟೇಲ್ ಅವರು ಸಿಎಂ ಆಗಿದ್ದರು. ಶಾಸಕರಾಗಿದ್ದ ನಾನು ಮತ್ತು ಆಯನೂರು ಮಂಜುನಾಥ ಅವರು ಸದನದಲ್ಲಿ ಒಂಟಿ ಕಾಲಲ್ಲಿ ನಿಂತು ಪ್ರತಿಭಟನೆ ಮಾಡಿದ್ದೇವು ಎಂದು ಸ್ಮರಿಸಿದರು.

ಆರಗಕ್ಕೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದಾಗ ಎಣ್ಣೆ ಇಲ್ಲದ ದೀಪ ಹೇಗಿರುತ್ತದೆಂದು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಬಂದು ಕುತೂಹಲದಿಂದ ನೋಡುತ್ತಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net