ವಿದ್ಯುತ್ ಸ್ಪರ್ಶದಿಂದ ಕರು ಸಾವು

ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮದಲ್ಲಿ ಕರುವೊಂದು ಟಿಸಿ ಬಳಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದೆ.
HUN-SEP-5-5(COW DEATH AT DODDAHEJJURU)
Published on

ಹುಣಸೂರು: ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಟಿಸಿ ಬಳಿ ಹಸಿರು ಹುಲ್ಲು ತಿನ್ನಲು ಹೋದ ಕರುವೊಂದು ವಿದ್ಯುತ್ ಶಾಕ್‌ನಿಂದ ಸೋಮವಾರ ಮೃತಪಟ್ಟಿದೆ.


ಗ್ರಾಮದ ಪುಟ್ಟಯ್ಯ ಎಂಬುವರ ಕರು ವಿದ್ಯುತ್ ಸ್ಪರ್ಶದಿಂದ ಬಲಿಯಾಗಿದೆ. ದೊಡ್ಡಹೆಜ್ಜೂರು ವೀರನಹೊಸಳ್ಳಿ ಮುಖ್ಯರಸ್ತೆಯ ಬಳಿ ಇರುವ ಈ ಟಿಸಿ ಸುತ್ತ ಗಿಡಗಂಟಿಗಳು ಬೆಳೆದಿದ್ದು, ತೆರವುಗೊಳಿಸುವಂತೆ ಹಲವಾರು ಬಾರಿ ಸೆಸ್ಕ್‌ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಕರುವೊಂದು ಬಲಿಯಾಗಿದೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net