ವಿದ್ಯುತ್ ಕ್ಷೇತ್ರದಲ್ಲಿ ಹೊಸ ಮನ್ವಂತರ: ಬಿ.ವೈ.ರಾಘವೇಂದ್ರ

byr
Published on

ಶಿವಮೊಗ್ಗ: ವಿದ್ಯುತ್ ಕ್ಷೇತ್ರದಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಪ್ರಯತ್ನಗಳು ಆಗುತ್ತಿವೆ. ಶೇ.100 ಗ್ರಾಮೀಣ ವಿದ್ಯುದೀಕರಣ ಸಾಧಿಸಲಾಗಿದೆ. 18,500 ಗ್ರಾಮಗಳು, 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ ಃ2047 ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಪಂಪ್‌ಸೆಟ್‌ಗಳಿಗೆ ರಾಜ್ಯ ಮತ್ತು ಕೇಂದ್ರದ ತಲಾ ಶೇ.30 ಸಬ್ಸಿಡಿ ತಲುಪಿದೆ. 2.68 ಲಕ್ಷ ಸರ್ಕ್ಯುಟ್ ಕಿ.ಮೀ. ಎಚ್‌ಡಿ ಲೈನ್ ಸ್ಥಾವರ, 6,500 ಸರ್ಕ್ಯುಟ್ ಕಿ.ಮೀ. ಎಲ್‌ಟಿ ಲೈನ್ ಸ್ಥಾವರ ಸ್ಥಾಪನೆ ಆಗಿದೆ ಎಂದರು.

ರಾಜ್ಯದಲ್ಲಿ 25 ಲಕ್ಷ ರೈತರ ಪಂಪ್‌ಸೆಟ್ ಇದ್ದು 11 ಸಾವಿರ ಕೋಟಿ ರೂ. ವಿದ್ಯುತನ್ನು ಉಚಿತವಾಗಿ ನೀಡಿದ್ದು, ಇನ್ನೂ ಅನೇಕ ಜನಪರ ಯೋಜನೆಗಳ ಮೂಲಕ ಇಂಧನ ಇಲಾಖೆ ಗೌರವ ತರುವ ಕೆಲಸ ಮಾಡುತ್ತಾ ಉತ್ತಮ ಕೊಡುಗೆಯನ್ನು ರಾಜ್ಯಕ್ಕೆ ನೀಡಿದೆ. ವಿದ್ಯುತ್ ಕಳ್ಳತನ, ಸೋರಿಕೆಯನ್ನು ಸಹ ಕಡಿಮೆ ಮಾಡುವ ಪ್ರಯತ್ನ ಇನ್ನೂ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net