ವಿದ್ಯುತ್ ಕಂಬಕ್ಕೆ ಗ್ಯಾಸ್ ಲಾರಿ ಡಿಕ್ಕಿ

15 KRN-2...
ಕೆ.ಆರ್.ನಗರ ಪಟ್ಟಣದ ಹುಣಸೂರು ರಸ್ತೆಯ ಉಪಕಾರಗೃಹದ ಬಳಿ ವಿದ್ಯುತ್ ಕಂಬಕ್ಕೆ ಅಡುಗೆ ಅನಿಲದ ಸಿಲಿಂಡರ್ ತುಂಬಿದ ಲಾರಿ ಡಿಕ್ಕಿಯಾಗಿ ಕಂಬ ಮೂರು ತುಂಡಾಗಿರುವುದು.
Published on

ಕೆ.ಆರ್.ನಗರ: ಚಾಲಕನ ನಿಯಂತ್ರಣ ತಪ್ಪಿದ ಅಡುಗೆ ಅನಿಲ ಸಿಲಿಂಡರ್ ತುಂಬಿದ್ದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಯಾವುದೇ ಅವಘಡ ಸಂಭವಿಸಿಲ್ಲ.
ಪಟ್ಟಣದ ಹುಣಸೂರು ರಸ್ತೆಯ ಉಪಕಾರಾಗೃಹದ ಬಳಿ ಶನಿವಾರ ಬೆಳಗ್ಗೆ ಹುಣಸೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮೂರು ತುಂಡಾಗಿ ಲಾರಿಯ ಮೇಲೆಯೇ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿ ಚಾಲಕ ಗಾಯಗೊಂಡಿದ್ದು, ಆಸ್ಪತ್ತೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ ಹಾಗೂ ಎಇ ಪ್ರಸನ್ನ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ವಿದ್ಯುತ್ ಸ್ಥಗಿತಗೊಳಿಸಿ, ಹೊಸ ಕಂಬವನ್ನು ಅಳವಡಿಸಲಾಯಿತು. ಲಾರಿಯಲ್ಲಿದ್ದ ಸಿಲಿಂಡರ್‌ಗಳನ್ನು ಬೇರೆ ವಾಹನದ ಮೂಲಕ ಸಾಗಾಟ ಮಾಡಿದರು. ಲಾರಿ ಮಾಲೀಕ ಹೊಸ ಕಂಬಕ್ಕೆ ತಗಲುವ ವೆಚ್ಚವನ್ನು ತಾನೇ ಭರಿಸುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net