

ಹಾಸನ : ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು, ವಿದ್ಯಾರ್ಥಿಗಳು ಕೇವಲ ಪರೀಕ್ಷೆಗೆ ಸೀಮಿತವಾಗದೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸುವ ಸಿದ್ಧತೆಯನ್ನು ಶಿಕ್ಷಕರು ಈಗಿನಿಂದಲೇ ಮಾಡಬೇಕು ಎಂದು ಶಾಸಕ ಪ್ರೀತಂ ಗೌಡ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಗಣಿತಶಾಸ್ತ್ರ ವೇದಿಕೆ ವತಿಯಿಂದ ಬುಧವಾರ ನಡೆದ ಗಣಿತಶಾಸ್ತ್ರ ಸಾಮಾನ್ಯ ಪ್ರವೇಶ ಪರೀಕ್ಷೆ ಕೈಪಿಡಿ ಬಿಡುಗಡೆ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವ ಕಾಲವಿತು.್ತ ಆದರೆ ಇದೀಗ ಉತ್ತಮ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಿಕ್ಷಕರ ವರ್ಗ ಶ್ರಮಿಸುತ್ತಾ ಬಂದಿದೆ. ಅದನ್ನು ವಿದ್ಯಾರ್ಥಿಳು ಸದುಪಯೋಗ ಪಡಿಸಿಕೊಂಡು ಶಾಲಾ- ಕಾಲೇಜಿಗೆ ಉತ್ತಮ ಹೆಸರು ಬರುವಂತೆ ಮಾಡಬೇಕು ಎಂದರು.
ಇದೇ ವೇಳೆ ಸಿ.ಇ.ಟಿ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಗಣಿತಶಾಸ್ತ್ರ ವೇದಿಕೆ ಕಾರ್ಯದರ್ಶಿ ಡಿ. ಶೋಭಾ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಹಾಲುವಾಗಿಲಿನಲ್ಲಿ ನಮ್ಮ ವೇದಿಕೆ ಆರಂಭವಾಗಿದ್ದು, ಎಲ್ಲಾ ಉಪಾಧ್ಯಾಯರನ್ನು ಸೇರಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದ ಅವರು ಗ್ರಾಮೀಣ ಮಕ್ಕಳಿಗೆ ಸಿ.ಇ.ಟಿ ಪುಸ್ತಕ ಬಿಡುಗಡೆ ಆಗಲಿದ್ದು, ಎಲ್ಲಾ ಮಕ್ಕಳಿಗೆ ಅನುಕೂಲವಾಗಲಿದೆ ಹಾಗಾಗಿ ವಿದ್ಯಾರ್ಥಿಗಳು ಈ ಪುಸ್ತಕವನ್ನು ಸಧ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿನೂರಕ್ಕೆ ನೂರು ಅಂಕ ಪಡೆದು ತೆರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಗುತ್ತದೆ. ಪ್ರಥಮ ಪಿಯುಸಿ ಆರಂಭದಿಂದಲೇ ಸಿ.ಇ.ಟಿ ಯ ಅರಿವು ಮೂಡಿಸುವ ಉದ್ದೇಶದಿಂದ ಈ ಪುಸ್ತಕ ರಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ.ಪ. ಪೂ. ಇಲಾಖೆಯ ಉಪ ನಿರ್ದೇಶಕ ಸಿ.ಎಂ ಮಹಾಲಿಂಗಯ್ಯ, ಹಾಸನ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಗಣಿತ ಶಾಸ್ತ್ರ ವೇದಿಕೆಯ ಅಧ್ಯಕ್ಷ ಡಿ.ವಿ ಸುರೇಶ್, ಪ. ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಗೋಪಾಲ, ಪ. ಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್. ಟಿ ಸುರೇಶ್, ಗಣಿತ ಶಾಸ್ತ್ರ ವೇದಿಕೆಯ ಮಹಾ ಪೋಷಕರಾದ ಎಸ್. ಲೋಕೇಶ್, ನಂದಿನಿ, ಪ್ರಾಂಶುಪಾಲರಾದ ತಿಮ್ಮೇಗೌಡ, ಅನ್ನಪೂರ್ಣ, ಕೆ.ಪಿ ಸುರೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ವೈ. ಜೇ ಶಂಕರಯ್ಯ, ಗಣಿತ ಶಾಸ್ತ್ರ ವೇದಿಕೆಯ ಕಾರ್ಯದರ್ಶಿ ಶೋಭಾ, ಖಜಾಂಚಿ ಪ್ರಾಣೇಶ್ ರಾವ್ ಇತರರು ಇದ್ದರು