

ಚಿಕ್ಕೋಡಿ ಗ್ರಾಮೀಣ: ಮಕ್ಕಳು ಗುಣಮಟ್ಟದ ಶಿಣ ಪಡೆದು ಸುಭದ್ರ ರೂಪಿಸಿಕೊಳ್ಳುವ ಜತೆಗೆ ಸಮಾಜ ಮತ್ತು ದೇಶಕ್ಕೆ ಮೌಲಿಕ ಕೊಡುಗೆ ನೀಡಬೇಕು ಎಂದು ಅಕ್ವೀನ್ ಸಿಎಸ್ಆರ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಲಕಾಟೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಅಮೆರಿಕದ ಅಕ್ವೀನ್ ಸಿಎಸ್ಆರ್ ಕಮಿಟಿ ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 3 ಲಕ್ಷ ರೂ. ವೆಚ್ಚದ ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಕ್ಕೋಡಿ ಬಿಆರ್ಪಿ ಎಂ.ಎಸ್.ಅಂಬಾಯಿ, ಮುಖ್ಯಶಿಕ್ಷಕ ಆರ್.ಎಸ್.ಮಡಿವಾಳ, ಮಹಾದೇವಿ ಹಲಕಾಟೆ, ಶ್ರೇಯಾ ಹಲಕಾಟೆ, ಶ್ರುತಿ ಕಮತೆ, ಪೋಪಟ್ ಕಬಾಡೆ, ರುದ್ರು ಮಗದುಮ್ಮ, ಉಮೇಶ ಸಾತ್ವರ, ಅಣ್ಣಾಸಾಹೇಬ ಹಲಕಾಟೆ, ಮಂಜುನಾಥ ಹಲಕಾಟೆ, ಎಸ್.ಬಿ.ಹಿರೇಮಠ, ಸುರೇಖಾ ಕಬ್ಬೂರೆ, ಎಸ್.ಕೆ.ಬಸಲಿಂಗಗೋಳ, ಸವಿತಾ ಮಸ್ತೆ, ಉದಯ ಖೋತ, ಕೃಷ್ಣ ಘಾಟಗೆ ಇತರರಿದ್ದರು.