

ಐನಾಪುರ: ವಿದ್ಯಾರ್ಥಿಗಳು ಓದುವ ಹವ್ಯಾಸದ ಜತೆಗೆ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಗುರಿ ತಲುಪಲು ಸಾಧ್ಯ ಎಂದು ಶಾಸಕ ರಾಜು ಕಾಗೆ ಹೇಳಿದರು.
ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದ ಹತ್ತಿರವಿರುವ ಟ್ರೀ ಪಾರ್ಕ್ನಲ್ಲಿ ಸೋಮವಾರ ಹಸಿರು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ನೂತನ ಹಸಿರು ಗ್ರಂಥಾಲಯ ಆರಂಭಿಸಲಾಗಿದ್ದು, ಇದು ಕರ್ನಾಟಕ ಸಸ್ಯೋದ್ಯಾನದಲ್ಲಿ ಇದು ಮೊದಲನೇಯದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಉಚಿತ ನೋಂದಣಿ ಮಾಡಿ ಅಧ್ಯಯನ ಮಾಡಬಹುದು ಎಂದರು.
ಅಥಣಿ-ಕಾಗವಾಡ ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ, ವಿದ್ಯಾರ್ಥಿಗಳು ಇತ್ತೀಚಿನ ೨ ಭಾವಚಿತ್ರ ಹಾಗೂ ಆಧಾರ ಕಾರ್ಡ್ ನೀಡಿ ನೋಂದಣಿ ಮಾಡಿಸಿ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ, ಶಾಂತಿಸಾಗರ ವಿದ್ಯಾಪೀಠದ ಅಧ್ಯಕ್ಷ ಅರುಣ ಗಾಣಿಗೇರ, ಸಂಜು ಭಿರಡಿ, ಪ್ರಕಾಶ ಕೋರ್ಬು, ರಾಜುಗೌಡ ಪಾಟೀಲ, ಸುಭಾಸ ಪಾಟೀಲ, ಚಮನರಾವ ಪಾಟೀಲ, ವಿಶ್ವನಾಥ ನಾಮದಾರ, ದಾದಾ ಜಂತೆನ್ನವರ, ಕುಮಾರ ಜಯಕರ. ಸುರೇಶ ಅಡಿಸೇರಿ, ಅರವಿಂದ ಕಾರ್ಚಿ, ಸಂಜು ಕುಸನಾಳೆ, ಪ್ರಕಾಶ ಗಾಣಿಗೇರ, ಸುನೀಲ ಅವಟಿ, ಅಮಗೊಂಡ ಒಡೆಯರ ಇತರರಿದ್ದರು.