ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಇರಲಿ

01 TKE 3
ತರೀಕೆರೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಊರ್ಮಿಳಾ ಉದ್ಘಾಟಿಸಿದರು. ನಾಗೇಂದ್ರನಾಯ್ಕ, ಎನ್.ಚರಣ್‌ರಾಜ್, ಎಸ್.ಸುರೇಶ್‌ಚಂದ್ರ, ಎನ್.ವೀರಭದ್ರಪ್ಪ, ಬಿ.ಪಿ.ವಿಕಾಸ್ ಇತರರಿದ್ದರು.
Published on

ತರೀಕೆರೆ: ಸಾಮಾಜಿಕ ಜಾಲತಾಣದ ಬಳಕೆಗಿಂತ ದುಷ್ಪರಿಣಾಮಗಳೇ ಹೆಚ್ಚಾಗುತ್ತಿವೆ. ಈ ಕುರಿತು ಮಕ್ಕಳು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ

ಊರ್ಮಿಳಾ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ನೆರವು ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ

ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ವಾಟ್ಸಾಪ್, ೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋಗಳು ಹರಿದಾಡುತ್ತಿದ್ದು ಜನರು ದಾರಿತಪ್ಪುವಂತಾಗಿದೆ. ಮಕ್ಕಳು ಸೇರಿ ಪ್ರತಿಯೊಬ್ಬರು ಇದರ ಬಗ್ಗೆ

ತಲೆಕೆಡಿಸಿಕೊಳ್ಳದೆ ಸಾಧನೆಗಾಗಿ ಹೊಂದಿರುವ ಗುರಿಯತ್ತ ಚಿತ್ತ ಹರಿಸಬೇಕು. ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪೋಕ್ಸೋ ಕಾಯ್ದೆ ಇನ್ನಿತರ ಕಾನೂನು ಕಟ್ಟಲೆಗಳ ಮಾಹಿತಿ

ತಿಳಿದುಕೊಳ್ಳಬೇಕು ಎಂದರು.

ಅಪರಿಚಿತರ ಜತೆ ಸಲುಗೆಯಿಂದ ಮಾತನಾಡುವುದಿರಲಿ, ಅವರು ತೋರಿಸುವ ಆಸೆಗಳಿಗೆ ಬಲಿಯಾಗಬಾರದು. ಶಾಲೆ ಅಥವಾ ಇನ್ನೆಲ್ಲಿಯೇ ಆಗಲಿ ಲೈಂಗಿಕ ಕಿರುಕುಳ ನೀಡುವುದು ಗೊತ್ತಾದ

ತಕ್ಷಣ ಪಾಲಕರು, ಮುಖ್ಯ ಶಿಕ್ಷಕರು, ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.

ಪಿಎಸ್‌ಐ ನಾಗೇಂದ್ರ ನಾಯ್ಕ ಮಾತನಾಡಿ, ಅಪ್ರಾಪ್ತ ಮಕ್ಕಳು ಕಾರು, ಬೈಕ್ ಓಡಿಸುತ್ತಿರುವುದು ಕಂಡು ಬಂದಿದೆ. 18 ವರ್ಷ ಮೇಲ್ಪಟ್ಟವರು ಪರವಾನಗಿ ಪಡೆದು ವಾಹನ ಓಡಿಸಬೇಕು.

ಪ್ರೀತಿ, ಪ್ರೇಮದ ಬಲೆಗೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದರು. ಸಿಡಿಪಿಒ ಎನ್.ಚರಣ್‌ರಾಜ್, ವಕೀಲರಾದ ಎಸ್.ಸುರೇಶ್ ಚಂದ್ರ, ಎನ್.ವೀರಭದ್ರಪ್ಪ, ಬಿ.ಪಿ.ವಿಕಾಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net