

ಸರಸ್ವತಿಪುರಂ ನಾಲ್ಕನೇ ಮುಖ್ಯ ರಸ್ತೆಯಲ್ಲಿನ ವಿಶ್ವ ಪ್ರಾಣಿಕ್ ಹೀಲಿಂಗ್ ಫೌಂಡೇಷನ್ ಸಂಶೋಧನಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಆರೋಗ್ಯ ಸಮಸ್ಯೆ ಕುರಿತ ಸವಾಲುಗಳ ಬಗ್ಗೆ ನೆರವಾಗಲು ಹೊಸ ಮಾರ್ಗ ಕಂಡು ಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಾಗುತ್ತಿದೆ.
ಹೀಗಾಗಿ 18 ರಿಂದ 22 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಮುಂದೆ ಬರಬಹುದಾಗಿದೆ ಎಂದು ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಜೋಯಿಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಐದು ವಾರಗಳ ಅಧ್ಯಯನವಾಗಿದೆ. ಭಾಗವಹಿಸುವವರು ತಮ್ಮ ಮಾನಸಿಕ ಹಾಗೂ ಭಾವನಾತ್ಮಕ ಸ್ಥಿತಿ ಕುರಿತು ಉತ್ತರಿಸಬೇಕಾಗುತ್ತದೆ. ಇವರಿಗೆ ಅಗತ್ಯವಿದ್ದಲ್ಲಿ ಪ್ರಾಣಿಕ್ ಚಿಕಿತ್ಸೆ ನೀಡಲಾಗುವುದು. ಈ ಅಧ್ಯಯನದ ವೇಳೆ ಕಂಡು ಬರುವ ಫಲಿತಾಂಶವನ್ನು ವಿವಿಧ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗುವುದು. ಭಾಗವಹಿಸುವವರಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಹೆಚ್ಚಿನ ಮಾಹಿತಿಗೆ ದೂ.2340673, ಮೊ. 9916002540 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ನಾಗೇಂದ್ರಪ್ರಸಾದ್, ರೂಪಾ, ಮಾನಸಾ, ವಿನು, ಡಾ.ಮಂಜುನಾಥ್ ಇದ್ದರು.