ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಕಾಲೇಜುಗಳು

college (7)
Published on

ಒಪ್ಪಿಗೆ ಪತ್ರ ಕಡ್ಡಾಯ: ಎಸ್‌ಒಪಿನಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರಿಂದ ಒಪ್ಪಿಗೆ ಪತ್ರ ತರಬೇಕೆಂದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಪತ್ರ ಹಾಗೂ ಕರೊನಾ ಪರೀಕ್ಷೆಯ ಲಿತಾಂಶದ ಪತ್ರವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

ಬೆಂ.ವಿವಿ ಸ್ಯಾನಿಟೈಸ್: ತರಗತಿಗಳನ್ನು ಆರಂಭಿಸಲು ಬೆಂ.ವಿವಿಯು ಸಿದ್ಧತೆಯಲ್ಲಿ ತೊಡಗಿದ್ದು, ಭಾನುವಾರ ಎಲ್ಲ ತರಗತಿಗಳನ್ನು ವಿವಿಯ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅವರೇ ಖುದ್ದು ನಿಂತು ಸ್ಯಾನಿಟೈಸ್ ಮಾಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ವಿವಿಯ ತರಗತಿಗಳಿಗೆ ಹೋಗಬಹುದಾಗಿದೆ.

ಒಂದು ಕಡೆ ಪಾಲಕರ ಮುಚ್ಚಳಿಕೆ ಪತ್ರ ಪಡೆದು ಭೌತಿಕ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಸಹ ಸಿದ್ಧರಾಗಿದ್ದರೆ, ಮತ್ತೊಂದು ಕಡೆ ಕಾಲೇಜು ಆರಂಭದ ಮೊದಲ ದಿನದ ವಾತವರಣವನ್ನು ಪರಿಶೀಲಿಸಿ ಆನಂತರ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಮತ್ತಷ್ಟು ಪಾಲಕರು ಆಲೋಚಿಸಿದ್ದಾರೆ.

ಕರೊನಾ ಬಂದ ಮೇಲೆ ಭೌತಿಕ ತರಗತಿ ನಡೆಸಲು ಅನುಮತಿ ನೀಡರಲಿಲ್ಲ. ಇದರಿಂದ ಆನ್‌ಲೈನ್‌ನಲ್ಲೇ ಶಿಕ್ಷಣ ನಡೆಯುತ್ತಿತ್ತು.

ಇನ್ನೂ ವಿಶ್ವವಿದ್ಯಾಲಯಗಳಲ್ಲಿ ತರಗತಿಗಳ ಜತೆಗೆ ಹಾಸ್ಟೆಲ್ ಸಹ ಇರುವುದರಿಂದ ಎರಡು ಮೂರು ದಿನದಿಂದ ಹಿಂದೆಯೇ ಸ್ಯಾನಿಟೈಸ್ ಮಾಡುವ ಕೆಲಸಕ್ಕೆ ವಿವಿಗಳು ಮುಂದಾಗಿವೆ.

ಕಾಲೇಜು ಆರಂಭಕ್ಕೂ ಮುನ್ನ ಎಲ್ಲ ತರಗತಿ ಮತ್ತು ಶೌಚಗೃಹಗಳನ್ನೆಲ್ಲಾ ಸ್ಯಾನಿಟೈಸ್ ಮಾಡುವಂತೆ ಸೂಚಿಸಿರುವುದರಿಂದ ಭಾನುವಾರದಿಂದ ಸ್ಯಾನಿಟೈಸ್ ಕೆಲಸವನ್ನು ಕಾಲೇಜುಗಳು ಆರಂಭಿಸಿವೆ.

ಕಾಲೇಜು ಆರಂಭದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನ.9ರಂದೇ ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್‌ಒಪಿ) ಬಿಡುಗಡೆ ಮಾಡಿತ್ತು. ಇದೀಗ ಆ ಪ್ರಕಾರವಾಗಿ ಕಾಲೇಜುಗಳು ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧವಾಗಿವೆ.

ಏಳೆಂಟು ತಿಂಗಳ ನಂತರ ರಾಜ್ಯದಲ್ಲಿ ಮಂಗಳವಾರದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ತರಗತಿಗಳು ಆರಂಭವಾಗಲಿವೆ.

ಬೆಂಗಳೂರು

ಡಾ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ

ವಿದ್ಯಾರ್ಥಿಗಳು ಭಯ ಬಿಟ್ಟು ಕಾಲೇಜಿಗೆ ಬರಬಹುದು.

ತರಗತಿಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಎಸ್‌ಒಪಿ ಅನುಷ್ಠಾನಕ್ಕೆ ಈಗಾಗಲೇ ಪ್ರಾಂಶುಪಾಲರ ಜತೆಗೆ ಸಭೆ ಮಾಡಿದ್ದೇನೆ.

ಕೋಟ್…

ಆನ್‌ಲೈನ್‌ಗಿಂತ ಅಫ಼್ ಲೈನ್ ತರಗತಿಗೆ ಹೋಗುವುದು ನನಗೆ ಇಷ್ಟ. ಮಂಗಳವಾರದಿಂದ ಕಾಲೇಜಿಗೆ ಹೋಗಲು ನಾನು ಸಿದ್ಧನಿದ್ದೇನೆ. ಸ್ನೇಹಿತರನ್ನು ನೋಡುವ ತವಕ ಇದೆ.
ಆರ್.ತೇಜಸ್, ಪಾಲಿಟೆಕ್ನಿಕ್ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net