

ಬಾಳೆಹೊನ್ನೂರು: ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಹ್ಯಾಮರ್ ಥ್ರೋ ವಿಭಾಗಕ್ಕೆ ಬಾಳೆಹೊನ್ನೂರಿನ ವಿದ್ಯಾರ್ಥಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.
ಪಟ್ಟಣದ ಎಸ್‌ಜೆಆರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಲೀಮ್ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯಲಿರುವ ಸ್ಪರ್ಧೆಗೆ ತೆರಳುವಾಗ ಶುಭ ಹಾರೈಸಿ ಮಾತನಾಡಿದರು.
ಸಾಲೀಮ್ ಕೆಲವು ವರ್ಷಗಳಿಂದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟದವರೆಗೆ ಸ್ಪರ್ಧೆ ಮಾಡಿ ಸಾಧನೆ ಮಾಡಿರುವುದು ಆತನ ಪರಿಶ್ರಮಕ್ಕೆ ಸಾಕ್ಷಿ ಎಂದರು.
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ವಿಜಯಶಾಲಿಯಾಗಿ ಜಿಲ್ಲೆಯ, ರಾಜ್ಯದ ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು. ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜ ಭಟ್, ದೈಹಿಕ ಶಿಕ್ಷಣ ಶಿಕ್ಷಕ ರಮೇಶ್, ಕಾಫಿ ಬೆಳೆಗಾರ ಕೌಶಿಕ್ ಪಟೇಲ್ ಹಲಸೂರು, ಮಹಮ್ಮದ್ ಆಲಿ, ಪ್ರಶಾಂತ್ ಇತರರಿದ್ದರು.