ವಿಜೃಂಭಣೆಯ ಶ್ರೀ ವಿದ್ಯಾಶಂಕರ ರಥೋತ್ಸವ

29sri-3
ಶೃಂಗೇರಿ ಶ್ರೀ ಶಾರದಾಪೀಠದ ಶ್ರೀ ವಿದ್ಯಾಶಂಕರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಶೃಂಗೇರಿ: ಶ್ರೀ ಶಾರದಾಪೀಠದ ಶ್ರೀ ವಿದ್ಯಾಶಂಕರ ರಥೋತ್ಸವ ಬುಧವಾರ ನೆರವೇರಿತು. ರಂಗವಲ್ಲಿಗಳು, ಶ್ರೀಮಠದ ಆನೆಗಳು, ಅಶ್ವಗಳು, ಛತ್ರಿಚಾಮರಗಳು, ವೇದ-ವಾದ್ಯಗೋಷ್ಠಿಗಳು ಉತ್ಸವಕ್ಕೆ ಮೆರುಗು ನೀಡಿದವು. ಮುಖ್ಯಬೀದಿಯಲ್ಲಿ ಸಾಗಿದ ರಥೋತ್ಸವದಲ್ಲಿ ತಾಲೂಕಿನ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ರಥೋತ್ಸವಕ್ಕೂ ಮುನ್ನ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಶ್ರೀಮಠದ 10ನೇ ಅಧಿಪತಿ ಜಗದ್ಗುರು ಶ್ರೀ ವಿದ್ಯಾತೀರ್ಥ ಸ್ವಾಮೀಜಿ ಅವರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾದರು. ಬಳಿಕ ದೇವಾಲಯದ ಆವರಣದಲ್ಲಿ ರಥೋತ್ಸವಕ್ಕೂ ಮುನ್ನ ಆಗಮಿಸಿ ಶ್ರೀ ವಿದ್ಯಾಶಂಕರ ಉತ್ಸವ ಮೂರ್ತಿಗೆ ಋತ್ವಿಜರು ಸಲ್ಲಿಸಿದ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net