ವಿಜಯೇಂದ್ರ ಫ್ರೀ ಇದ್ರೆ ನನ್ನ ಹೆರ್ ಕಟ್ಟಿಂಗ್ ಮಾಡಲಿ

minister madhu bangarappa
ಸಚಿವ ಮಧು ಬಂಗಾರಪ್ಪ
Published on

ಚಿತ್ರದುರ್ಗ: ನನ್ನ ಕೂದಲು ಕ್ಷೌರ ಮಾಡೋರು ಫ್ರೀ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಫ್ರೀ ಇದ್ರೆ ನನ್ನ ಹೆರ್ ಕಟ್ಟಿಂಗ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಚಿತ್ರರಂಗದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರ ತಂದೆ ಈಗಲೂ ರಾಜ್ಯದ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಂತೆ ಕಾಣುತ್ತಿದೆ ಎಂದು ಚಿತ್ರಮಂದಿರದಲ್ಲಿ ಪುಕ್ಕಟೆ ಸಿನಿಮಾ ನೋಡಿ ಮಜಾ ಮಾಡ್ತಿದ್ದಾರೆ ಎಂಬ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ವಿರೋಧ ಪಕ್ಷದಲ್ಲಿದ್ದು, ಟೀಕೆ ಟಿಪ್ಪಣಿಯೇ ಮುಖ್ಯವಾಗಬಾರದು. ಉತ್ತಮ ಕೆಲಸ ಯಾವ ಸರ್ಕಾರವೇ ಮಾಡಿದಾಗ ದ್ವನಿಗೂಡಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಬಿಜೆಪಿಯವರಿಗೆ ಹೊಟ್ಟೆ ಉರಿಯಾಗಿದೆ. ಜೂ. 4ರಂದು ಅವರ ಹಣೆ ಬರಹ ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.

ಹಿಂದಿನ ಮಾಜಿ ಸಚಿವ ಎನ್.ಮಹೇಶ್ ಪಠ್ಯದಲ್ಲಿ ಕೆಟ್ಟ ಬುದ್ದಿ ತುಂಬಿದ್ದರು. ಇಷ್ಟು ವರ್ಷ ಅವರು ಹೊಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ. ಈಗಿನ ನಮ್ಮ ಪಠ್ಯ ಪುಸ್ತಕ ಶುದ್ಧಿಯಾಗಿ, ಪರಿಷ್ಕರಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೆಲ ವೇಳೆ ನನಗೆ ಕನ್ನಡ ಶಬ್ದ ಕಷ್ಟ ಆಗಿದೆ. ಟ್ರೋಲ್ ಮಾಡುವುದರಿಂದ ಅವರಿಗೆ ಹೊಟ್ಟೆ ತುಂಬುತ್ತೆ. ಆದರೆ, ಇದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಬಿಜೆಪಿಯವರ ಹಣೆ ಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲು ಆಗಲಿಲ್ಲ. ಕಾಂಗ್ರೆಸ್ ಬಂದ ಬಳಿಕ ಈ ಪ್ರಕ್ರಿಯೆ ನಡೆದಿದೆ. ಶಿಕ್ಷಣದ ಪಾವಿತ್ರ್ಯತೆ ಕೂಡಾ ಕಾಪಾಡಿದ್ದೇವೆ. ಮಕ್ಕಳ ಹಿತ ದೃಷ್ಟಿಯಿಂದ ಕೆಲ ಉತ್ತಮ ನಿರ್ಧಾರ ಕೈಗೊಂಡಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net