ವಿಜಯವಾಣಿ "ಫಲಶೃತಿ" ಅರಾಭಿಕೊತ್ತನೂರು ಬಳಿ ಅತಂತ್ರ ಸ್ಥಿತಿಯಲ್ಲಿದ್ದ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ನೆಲಸಮ / ಅಂಡರ್ ಪಾಸ್ ಸ್ವಚ್ಛತೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲ್ಲೂಕಿನ ಅರಾಭಿಕೊತ್ತನೂರು ಬಳಿ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಶಾಲಾ ಕಟ್ಟಡವನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರು ನೆಲಸಮಗೊಳಿಸಿದ್ದಾರೆ.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯನ್ನು ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿತ್ತು. ರಾಷ್ಟಿçÃಯ ಹೆದ್ದಾರಿ ೪ ಪಥ ರಸ್ತೆ ಆದ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಹೆದ್ದಾರಿಯವರು ವಶಕ್ಕೆ ಪಡೆದು ರಾಷ್ಟಿçÃಯ ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಶಾಲೆಯನ್ನು ನಿರ್ಮಿಸಿಕೊಟ್ಟಿದ್ದರು.

ಹಳೆಯ ಪ್ರೌಢಶಾಲೆ ಶುಚಿತ್ವವಾಗಿ ಇದ್ದರೂ ರಾಷ್ಟಿçÃಯ ಹೆದ್ದಾರಿಗೆ ಸೇರಬಯಸುತ್ತದೆಂದು ಶಾಲೆಯ ಕಟ್ಟಡವನ್ನು ಬೇರೆ ವರ್ಗಾವಣೆ ಮಾಡಿದಾಗ ಶಾಲೆಯ ಕೊಠಡಿಗಳನ್ನು ಅನೈತಿಕ ತಾಣಗಳನ್ನಾಗಿ ಸಾರ್ವಜನಿಕರು ಉಪಯೋಗಿಸಿಕೊಳ್ಳುತ್ತಿದ್ದರು. ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ನ.೯ ರಂದು ಸುದ್ದಿ ಪ್ರಕಟವಾಗಿತ್ತು.

ಎಚ್ಚೆತ್ತುಕೊಂಡ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರು ಕಳೆದ ೩ ದಿನಗಳ ಹಿಂದೆ ಶಾಲಾ ಕಟ್ಟಡವನ್ನು ನೆಲಸಮಗೊಳಿಸುವ ಕೆಲಸ ಮಾಡಿದ್ದಾರೆ. ರಾಷ್ಟಿçÃಯ ಹೆದ್ದಾರಿಯ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಸದರಿ ಶಾಲಾ ಕಟ್ಟಡದ ಜಾಗವನ್ನು ಉಪಯೋಗಿಸಿಕೊಳ್ಳುವ ಕಾರಣಕ್ಕೆ ಶಾಲಾ ಕಟ್ಟಡವನ್ನು ತೆರವುಗೊಳಿಸಿದ್ದಾರೆ.

ಸುಮಾರು ವರ್ಷಗಳಿಂದ ಸದರಿ ಶಾಲೆಯನ್ನು ಸಾರ್ವಜನಿಕರು ಗುಂಡು ಪಾರ್ಟಿಗಳಿಗೆ ಮತ್ತು ಅನೈತಿಕ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದರು. ಸುಮಾರು ೭ ರಿಂದ ೮ ಕೊಠಡಿಗಳಿದ್ದ ಪ್ರೌಢಶಾಲಾ ಆವರಣವನ್ನು ಪುಂಡು ಪೋಕರರು ಕೆಲವೊಂದು ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.

ಸದರಿ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳು ನಾವು ಓದಿದ ಶಾಲೆಗೆ ಈ ರೀತಿಯ ಗತಿ ಬರಬಾರದಾಗಿತ್ತು. ಕೂಡಲೇ ರಾಷ್ಟಿçÃಯ ಹೆದ್ದಾರಿಯವರು ಕ್ರಮ ಕೈಗೊಂಡು ಸದರಿ ಕಟ್ಟಡವನ್ನು ಹೆದ್ದಾರಿಯವರು ಅನ್ಯ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು ಅಥವಾ ನೆಲಸಮಗೊಳಿಸಬೇಕೆಂದು ವಿಜಯವಾಣಿ ಪತ್ರಿಕೆಯ ಮೂಲಕ ಒತ್ತಾಯಪಡಿಸಿದ್ದರು.

ಬಾಕ್ಸ್

ಅರಾಭಿಕೊತ್ತನೂರು ಬಳಿ ರಾಷ್ಟಿçÃಯ ಹೆದ್ದಾರಿಯವರು ನಿರ್ಮಿಸಿದ್ದ ಅಂಡರ್‌ಪಾಸ್ ಶಿಥಿಲ ವ್ಯವಸ್ಥೆಗೆ ತಲುಪಿ ಮಳೆಗಾಲದಲ್ಲಿ ನೀರು ತುಂಬಿ ಸಾರ್ವಜನಿಕರು ಓಡಾಡಲು ಅನಾನುಕೂಲವಾಗಿದೆ. ಹಾಗೂ ಅಂಡರ್‌ಪಾಸ್‌ನಲ್ಲಿ ಗಿಡಗಂಟೆಗಳು ಬೆಳೆದು ಸ್ವಚ್ಛತೆ ಇಲ್ಲದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರು ಎಚ್ಚೆತ್ತುಕೊಂಡು ಅಂಡರ್‌ಪಾಸ್‌ನ್ನು ನೀರು ನಿಲ್ಲದಂತೆ ಹರಿದುಹೋಗಲು ಕಾಲುವೆ ವ್ಯವಸ್ಥೆ ಹಾಗೂ ಬೆಳೆದಿದ್ದ ಗಿಡಗಂಟೆಗಳನ್ನು ತೆರವು ಕಾರ್ಯ ಮಾಡಿದ್ದಾರೆ.

ಚಿತ್ರ ೧೦ ಕೆ.ಎಲ್.ಆರ್. ೦೧ : ವಿಜಯವಾಣಿ ಫಲಶೃತಿಯಿಂದ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿರುವುದು.

ಚಿತ್ರ ೧೦ ಕೆ.ಎಲ್.ಆರ್. ೦೧ಎ : ವಿಜಯವಾಣಿ ಪತ್ರಿಕೆಯ ವರದಿ ಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net