ವಿಚಾರಧಾರೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

29. PYP. 01
Published on

ಪಿರಿಯಾಪಟ್ಟಣ: ಜಾತಿ ಮತದ ಹಂಗು ತೊರೆದು ನಾವೆಲ್ಲರೂ ಒಂದೇ ಎಂದು ತಮ್ಮ ಕೃತಿಗಳ ಮೂಲಕ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.


ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಏರ್ಪಡಿಸಿದ್ದ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ರಚಿಸಿದ ಪುಸ್ತಕಗಳಿಗೆ ಬೆಲೆ ಕಟ್ಟಿ ಕೊಳ್ಳಬಹುದು. ಆದರೆ, ಅದರೊಳಗಿನ ವಿಚಾರಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕುವೆಂಪು ತಮ್ಮ ಕೃತಿಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದರು ಎಂದರು.


ದಸಂಸ ಮುಖಂಡ ಆರ್.ಎಸ್.ದೊಡ್ಡಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಕುವೆಂಪು ವರ ಜನ್ಮದಿನ ಕಾರ್ಯಕ್ರಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಚರಿಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ, ವಿಶ್ವ ಮಾನವತೆ ಚಿಂತನೆ ಹಾಗೂ ಸೃಜನಶೀಲತೆ ಹರಿಕಾರರಾದ ಕುವೆಂಪು ಅವರ ಕೃತಿಯಲ್ಲಿನ ಸಂದೇಶಗಳು ಜಾತೀಯತೆ ಹಾಗೂ ಅರ್ಥಹೀನ ಆಚರಣೆಗಳ ವಿರುದ್ಧವಾಗಿದ್ದವು ಎಂದರು.

ರೈತ ಸಂಘದ ಕಾರ್ಯಧ್ಯಕ್ಷ ಬಿ.ಜೆ.ದೇವರಾಜು, ಟಿಎಚ್‌ಒ ಡಾ.ಶರತ್ ಬಾಬು, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಕುಮಾರ್, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಶಿರಸ್ತೇದಾರ್ ನಂದಕುಮಾರ್, ಟ್ರಿಜಾ, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ದಿನೇಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮುಖಂಡರಾದ ಗಗನ್, ರಘುನಾಥ್, ಮಹದೇವ್, ಮುತ್ತುರಾಜ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net