

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವತಿಯಿಂದ 2025-26 ನೇ ಸಾಲಿನ ವಿಚಾರ ಗೋಷ್ಠಿ ಮತ್ತು ಕಾರ್ಯಗಾರವನ್ನು ನಡೆಸಲು ಸ್ವಯಂ ಸೇವಾ ಸಂಘ ಸಂಸ್ಥೆಗಳಿoದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ - ಸ್ವಯಂ ಸೇವಾ ಸಂಸ್ಥೆಯು ನೋಂದಾಯಿತ ಸಂಸ್ಥೆಯಾಗಿದ್ದು, ನೋಂದಣಿ ಚಾಲ್ತಿಯಲ್ಲಿರಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷ ಸೇವೆ ಅನುಭವ ಹೊಂದಿರಬೇಕು, ಪ್ರತಿ ವರ್ಷ ಆಡಿಟ್ ಮಾಡಿಸಿರಬೇಕು.
ಸಲ್ಲಿಸಬೇಕಾದ ದಾಖಲಾತಿ - ಸಂಸ್ಥೆಯು ಪರಿಶಿಷ್ಟ ನೋಂದಾಯಿತ ಪ್ರಮಾಣ ಪತ್ರ , ನವೀಕರಣ ಪತ್ರ ಹಾಗೂ ಮೂರು ವರ್ಷದ ಲೆಕ್ಕ ಪರಿಶೋಧನಾ ವರದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷ ಸೇವೆ ಅನುಭವ ಪತ್ರ ಹಾಗೂ ಅರಿವು ಮೂಡಿಸಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಛಾಯಾಚಿತ್ರ ಪತ್ರಿಕಾ ವರದಿಗಳನ್ನು ಸಲ್ಲಿಸಬೇಕು.
ಈ ಮೇಲ್ಕಂಡ ಅರ್ಹತೆ ಹಾಗೂ ದಾಖಲಾತಿಗಳೊಂದಿಗೆ ದಿನಾಂಕ 27-10-2025 ರಿಂದ 10-11-2025 ರ ಸಂಜೆ 5 ಗಂಟೆವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.