

ಕಲಬುರಗಿ: ಶ್ರೀಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ಅವರು ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ವಿಶ್ವ ಹಿಂದು ಪರಿಷತ್‌ನ ನಾಲ್ಕು ದಿನದ ಕೇಂದ್ರೀಯ ಮಂಡಳಿ ಬೈಠಕ್‌ನಲ್ಲಿ ಈ ನಿರ್ಧಾರ ಹೊರ ಬಿದ್ದಿದೆ. ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರಾಗಿದ್ದ ಲಿಂಗರಾಜ ಅಪ್ಪ ಅವರಿಗೆ ಇದೀಗ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಳೆದ ಒಂದು ದಶಕದಿಂದ ಸಂಘಪರಿವಾರದಲ್ಲಿ ಸಕ್ರಿಯರಾಗಿದ್ದಾರೆ. ಇವರ ತಂದೆ ಪೂಜ್ಯ ದಿ.ಬಸವರಾಜಪ್ಪ ಅಪ್ಪ ಸಹ ವಿಎಚ್‌ಪಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದರು.