ವಾಹನ ಡಿಕ್ಕಿಯಾಗಿ ಚಿರತೆ ಮರಿ ಸಾವು

19kdr2 chita
ಕಡೂರು ತಾಲೂಕು ಸಿದ್ದರಾಮನಹಳ್ಳಿ ಬಳಿ ಚಿರತೆ ಮರಿಯೊಂದು ವಾಹನಕ್ಕೆ ಡಿಕ್ಕಿಯಾಗಿ ಮೃತಪಟ್ಟಿರುವುದು.
Published on

ಕಡೂರು: ತಾಲೂಕಿನ ಸಿದ್ದರಾಮನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಚಿರತೆ ಮರಿಯೊಂದು ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದೆ. ಅಂದಾಜು 6 ತಿಂಗಳಿನ ಗಂಡು ಚಿರತೆ ಮರಿ ಮೃತಪಟ್ಟಿದೆ. ಎಸಿಎ್ ಮೋಹನ್ ನಾಯ್ಕ ಅವರ ಉಪಸ್ಥಿತಿಯಲ್ಲಿ ಕಡೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ದಹನ ಮಾಡಲಾಯಿತು. ವಲಯ ಅರಣ್ಯಾಧಿಕಾರಿ ಹರೀಶ್ ಇದ್ದರು.

ತಾಲೂಕಿನ ಕುಂಕನಾಡು ಬಳಿಯ ಶಿವಗಂಗಾ ಗಿರಿ ಬೆಟ್ಟದ ಆಸುಪಾಸಿನಲ್ಲಿ ಚಿರತೆ ಮರಿಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಸ್ತೆ ಮಧ್ಯೆ ಹಾಗೂ ಜಮೀನು, ತೋಟಗಳಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿರುವುದರಿಂದ ತೋಟದ ಮನೆಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತೋಟದ ಮನೆಯಲ್ಲಿರುವ ಜಾನುವಾರುಗಳ ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಬೆಟ್ಟದ ತಪ್ಪಲಿನಲ್ಲಿರುವ ಒಂದು ಚಿರತೆ ಮತ್ತು ಎರಡು ಮರಿಗಳನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮದ ಮುಖಂಡ ವಡೇರಹಳ್ಳಿ ಅಶೋಕ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net