ವಾಲ್ಮೀಕಿ ತತ್ವಾದರ್ಶ ಪಾಲಿಸಿ

ಕಂಪಲಾಪುರ ಸಮೀಪದ ಹೊನ್ನೆಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿದರು. ಮಮತಾ ತಮ್ಮಯ್ಯ, ಕವಿತಾ ಮಂಜು, ಮಹದೇವ್, ಬಿ.ಕೆ.ತಮ್ಮಯ್ಯ, ಪೂಜಾರ್ ಮಂಜು, ಚಂದ್ರು ಮತ್ತಿತರರಿದ್ದರು.
1665481977439
Published on

ಕಂಪಲಾಪುರ: ವಿಶ್ವದ ಮಹಾನ್ ಗ್ರಂಥ ರಾಮಾಯಣದ ಕರ್ತೃ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಸಲಹೆ ನೀಡಿದರು.


ಸಮೀಪದ ಹೊನ್ನೇಕೊಪ್ಪಲು-ಬೋರೆಹೊಸಳ್ಳಿ ಎರಡು ಗ್ರಾಮಗಳು ಒಟ್ಟಾಗಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವೇಷ-ಅಸೂಯೆ ತುಂಬಿರುವ ಇಂದಿನ ಸಮಾಜದಲ್ಲಿ ನಿಸ್ವಾರ್ಥ ಮನೋಭಾವ ದೂರವಾಗಿದೆ. ರಾಮಾಯಣ ಮಹಾಭಾರತದಂತಹ ಮಹಾನ್ ಗ್ರಂಥಗಳಲ್ಲಿ ಎಲ್ಲ ಸಂಬಂಧಗಳ ಬೆಸೆಯುವ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದವು. ಆದರೆ ಇಂದು ಸ್ವಾರ್ಥ ಹೆಚ್ಚಿ, ಸಂಬಂಧಗಳು ದೂರವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಹೊನ್ನೆಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಚೊಜ್ಜಲತಾಳಮ್ಮ ದೇವಸ್ಥಾನಕ್ಕೆ ವೈಯಕ್ತಿಕವಾಗಿ ಪ್ರಸನ್ನ ಅವರು 25 ಸಾವಿರ ರೂ. ದೇಣಿಗೆ ನೀಡಿದರು.


ಗ್ರಾಪಂ ಅಧ್ಯಕ್ಷೆ ಮಮತಾ ತಮ್ಮಯ್ಯ, ಸದಸ್ಯರಾದ ಕವಿತಾ ಮಂಜು, ಬಿ.ಕೆ.ತಮ್ಮಯ್ಯ, ಚಂದ್ರು, ಪೂಜಾರ್ ಮಂಜು, ರಾಮನಾಯ್ಕ, ನಿಂಗಣ್ಣ, ಕಾಳೇಗೌಡ, ಡೈರಿ ಮಂಜು, ಗೋವಿಂದ, ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಕುಮಾರನಾಯ್ಕ, ಕಾರ್ಯದರ್ಶಿ ಸುರೇಶ, ಖಜಾಂಚಿ ಚಂದ್ರನಾಯ್ಕ, ಶಶಿಕುಮಾರ್, ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net