ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಸರ್ಕಾರದ ನಿರ್ಲಕ್ಷ ಹಾಗೂ ಪ್ರಕೃತಿಯ ಮುನಿಸು ಇವುಗಳ ನಡುವೆ ಜಿಲ್ಲೆಯ ಮಾವು ಬೆಳೆಗಾರರಿಗೆ ಪ್ರತಿವರ್ಷವೂ ಶಾಪವಾಗಿ ಕಾಡತೊಡಗಿದೆ. ಈ ವರ್ಷದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಶನಿವಾರ ರಾತ್ರಿ ಗುಡುಗು ಸಹಿತ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಮಾವು ಸೇರಿದಂತೆ ತರಕಾರಿ ಬೆಳೆಗಳಿಗೆ ನಷ್ಟ ಉಂಟಾಗಿದೆ.
ಕೋಲಾರ ಜಿಲ್ಲೆಯಲ್ಲಿಯೇ ಸುಮಾರು ೫೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೩೦ ಸಾವಿರಕ್ಕಿಂತಲೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಬೆಳೆಯಾದ ಮಾವಿನ ಫಸಲನ್ನೇ ನಂಬಿ ಬದುಕುವ ಅನೇಕ ಕುಟುಂಬಗಳು ಇವೆ. ಈ ಕುಟುಂಬಗಳಿಗೆ ಮಾವು ಬೆಳೆಯೇ ಆಶ್ರಯ. ಇದನ್ನೇ ನಂಬಿ ಮಕ್ಕಳ ವಿದ್ಯಾಭ್ಯಾಸ ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಮಾವು ಫಸಲೇ ಈ ಕುಟುಂಬಗಳಿಗೆ ಆಶ್ರಯ.
ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಮಾವು ಬೆಳೆಯುತ್ತಿದ್ದು, ಮಾವು ಬೆಳೆಗಾರರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂಬ ಕೂಗು ಇದ್ದು, ಹೈಟೆಕ್ ಮಾರುಕಟ್ಟೆ ಸೇರಿದಂತೆ ಮಾವು ತಿರುಳು ಘಟಕ ಮತ್ತು ಶೀಥಿಲ ಕೇಂದ್ರಗಳು ಸರ್ಕಾರ ಸ್ಥಾಪನೆ ಮಾಡದೇ ಸರ್ಕಾರ ನಿರ್ಲಕ್ಷö್ಯ ವಹಿಸಿರುವುದು ಮಾವು ಬೆಳೆಗಾರರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಮಧ್ಯೆ ಪ್ರತಿವರ್ಷ ಪ್ರಕೃತಿ ಬೆಳೆಗಾರನ ಮೇಲೆ ಧಾಳಿ ಮಾಡುತ್ತಲೇ ಇರುತ್ತದೆ. ಹೂವು ಪ್ರಾರಂಭದಿAದ ಮಾವಿನ ಕಾಯಿ ಮಾರುಕಟ್ಟೆಗೆ ಹೋಗುವ ತನಕ ಪ್ರಕೃತಿ ಒಂದಲ್ಲ ಒಂದು ರೀತಿಯಲ್ಲಿ ಧಾಳಿ ನಡೆಸುತ್ತಲೇ ಇರುತ್ತದೆ. ಗಾಳಿ ಮಳೆ ಆಲಿಕಲ್ಲಿಗೆ ಋತುವಿಗೆ ಬಂದ ಕಾಯಿ ನೆಲಕಚ್ಚುವುದು ಉಂಟು. ಇಂಥಹ ನೆಲಕಚ್ಚಿದ ಕಾಯಿಯನ್ನು ರೈತರು ವ್ಯಾಪಾರಸ್ಥರು ಕೇಳಿದ ಬೆಲೆಗೆ ಮಾರಾಟ ಮಾಡುತ್ತಾರೆ. ಸರ್ಕಾರ ಉಪ್ಪಿನ ಕಾರ್ಖಾನೆ ಪ್ರಾರಂಭ ಮಾಡಿದ್ದರೆ ಆಗಾಗ ಬೀಳುವ ಮಳೆಯ ಆರ್ಭಟಕ್ಕೆ ನೆಲಕಚ್ಚಿದ ಮಾವನ್ನು ಉಪ್ಪಿನ ಕಾರ್ಖಾನೆಗಳಿಗೆ ರೈತರು ನೇರವಾಗ ನೀಡಿ ಒಂದಿಷ್ಟು ಕಾಸನ್ನು ಮಾಡಿಕೊಳ್ಳುತ್ತಿದ್ದರು.
ಈ ವರ್ಷದ ಪ್ರಥಮ ಮಳೆ, ಶನಿವಾರ ರಾತ್ರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಆರ್ಭಟ ಮಾಡಿದೆ. ಅದರಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ಶೆಟ್ಟಿಹಳ್ಳಿ, ನಂಬಿಹಳ್ಳಿ, ರೋಣೂರು ಹೋಬಳಿಯ ಸೋಮಯಾಜಲಪಲ್ಲಿ ಸುತ್ತಮುತ್ತಲ ಗ್ರಾಮಗಳ ಹಾಗೂ ಲಕ್ಷಿö್ಮÃಪುರ, ಪುಲಗೂರಕೋಟೆ ಮುಂತಾದ ಗ್ರಾಮಗಳಲ್ಲಿ ರಾತ್ರಿ ಸ್ವಲ್ಪ ಸುರಿದ ಆಲಿಕಲ್ಲು ಮಳೆಗೆ ಮಾವು ನೆಲಕಚ್ಚಿದೆ.
ಪ್ರಾರಂಭದಲ್ಲಿ ಹೂವು ಬಿಟ್ಟು ಕಾಯಿ ಆಗಿ ಹಿಡಿ ಗ್ರಾತ್ರಕ್ಕೆ ಹೋಲಿಕೆಯಾಗಿರುವ ಕಾಯಿಗಳೇ ನೆಲಕ್ಕೆ ಹುರುಳಿ ಬಿದ್ದಿವೆ. ತಡವಾಗಿ ಹೂವು ಕಾಣಿಸಿಕೊಂಡಿರುವ ಮರಗಳಲ್ಲಿ ಇನ್ನೂ ಗೋಲಿ ಗಾತ್ರದ ಕಾಯಿಗಳಾದ ಕಾರಣ ಅವು ಉಳಿದುಕೊಂಡಿವೆ. ವರ್ಷದ ಮಳೆ ಪ್ರಾರಂಭದಲ್ಲಿ ಈ ರೀತಿಯಾದರೆ ಇನ್ನು ಮಾವು ಜೂನ್ ಜುಲೈ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶ ಮಾಡುವ ತನಕ ಫಸಲನ್ನು ಕಾಪಾಡುವುದು ಯಾವ ರೀತಿ ಎಂಬುದು ರೈತರಲ್ಲಿ ಆತಂಕ ಉಂಟಾಗಿದೆ.
ಬಾಕ್ಸ್
ಶನಿವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಾವು ಅಲ್ಲದೆ ತರಕಾರಿ ಬೆಳೆಗಳಾದ ಕ್ಯಾಪ್ಸಿಕಂ, ಬೀನ್ಸ್, ಟೊಮೆಟೋ, ಎಲೆಕೋಸು, ಸೇವಂತಿಗೆ ಬೆಳೆಗಳು ನೆಲಕಚ್ಚಿವೆ. ಪಾಲಿಹೌಸ್‌ಗಳು ನೆಲಕ್ಕೆ ಉರುಳಿವೆ. ತೋಟದ ಶೆಡ್ಡುಗಳ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಭಾನುವಾರವೂ ಮಳೆಯ ಸೂಚನೆ ಇದ್ದು, ರಾತ್ರಿ ಬಿರುಗಾಳಿ ಮಳೆ ಬಂದರೆ ಮತ್ತಷ್ಟು ಮಾವು ನೆಲಕಚ್ಚಲಿದೆ ಎಂಬ ಆತಂಕ ರೈತರಲ್ಲಿ ಇದೆ.
ಕೋಟ್
ಪ್ರಥಮ ವರ್ಷದ ಪ್ರಥಮ ಮಳೆಯಲ್ಲಿಯೇ ಆಲಿಕಲ್ಲು ಮಳೆ ಆರ್ಭಟಕ್ಕೆ ಕೆಲವೊಂದು ಭಾಗಗಳಲ್ಲಿ ಮಾವು ಫಸಲು ಸೇರಿದಂತೆ ತರಕಾರಿ ಬೆಳೆಗಳು ನೆಲಕಚ್ಚಿವೆ. ಪ್ರಕೃತಿ ವಿಕೋಪವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ನಷ್ಟ ಪರಿಹಾರ ಸರ್ಕಾರವನ್ನು ಕೇಳುವಂತೆಯೇ ಇಲ್ಲ. ಪ್ರತಿವರ್ಷ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾದಾಗ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಕಛೇರಿಗೆ ಅಲೆದರೂ ಕೈಸೇರುವುದು ಕಷ್ಟ. ಇಲಾಖೆ ಎಚ್ಚೆತ್ತುಕೊಂಡು ಎಲ್ಲೆಲ್ಲಿ ಹಾನಿಯಾಗಿದೆ ಎಂಬುದನ್ನು ತಕ್ಷಣ ಸರ್ವೇ ನಡೆಸಿ, ಸರ್ಕಾರಕ್ಕೆ ವರದಿ ನೀಡಿದರೆ ರೈತರ ಮೇಲೆ ಸರ್ಕಾರಕ್ಕೆ ಕರುಣೆ ಇದ್ದರೆ ಪರಿಹಾರ ಕೊಡುತ್ತದೆ. ಇಲಾಖೆಯ ಬೇಜವಾಬ್ದಾರಿಯಿಂದ ರೈತರು ನಷ್ಟ ಪರಿಹಾರಕ್ಕೆ ಅರ್ಜಿ ನೀಡುವುದನ್ನು ವಿಳಂಭ ಮಾಡುತ್ತಿದ್ದಾರೆ.
-ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ.
ಚಿತ್ರ ೨೩ ಕೆ.ಎಲ್.ಆರ್. ೦೧ : ಆಲಿಕಲ್ಲು ಮಳೆಯಿಂದಾಗಿ ಮಾವು ನೆಲಕಚ್ಚಿರುವುದು.
ಚಿತ್ರ ೨೩ ಕೆ.ಎಲ್.ಆರ್. ೦೧ಎ : ನೆಲಕಚ್ಚಿದ ಸೇವಂತಿಗೆ ಹೂವು
ಚಿತ್ರ ೨೩ ಕೆ.ಎಲ್.ಆರ್. ೦೧ಬಿ : ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ.