ವರ್ತಕರು, ಆಟೋ ಚಾಲಕರಿಗೆ ನಷ್ಟ

mohith
Published on

ನಗರದ ಗ್ರಾಮಾಂತರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುವುದರಿಂದ ವರ್ತಕರು, ಆಟೋ ಚಾಲಕರಿಗೆ ನಷ್ಟವಾಗುತ್ತದೆ ಎಂದು ಉದ್ಯಮಿ ಮೋಹಿತ್ ಗೌಡ ತಿಳಿಸಿದ್ದಾರೆ.

ನಗರದ ಬಹುತೇಕ ಪ್ರವಾಸಿ ತಾಣಗಳು ನಗರದ ಹೃದಯ ಭಾಗದಲ್ಲಿವೆ. ಬಸ್ ನಿಲ್ದಾಣ ಸ್ಥಳಾಂತರದಿಂದ ಪ್ರವಾಸಿಗರಿಗೂ ಸಮಸ್ಯೆ ಎದುರಾಗಲಿದೆ. ಜತೆಗೆ ಬಸ್ ನಿಲ್ದಾಣ ಸ್ಥಳಾಂತರವಾದರೆ ನಗರದ ಹೃದಯ ಭಾಗದಲ್ಲಿರುವ ವರ್ತಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಬಸ್ ನಿಲ್ದಾಣದ ಸಮೀಪ ನಾನಾ ವ್ಯಾಪಾರ, ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಸದಸ್ಯ ಯೋಜನೆಯನ್ನು ಕೈ ಬಿಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net