ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಹೆಣ್ಣು ಮಕ್ಕಳಿಗೆ ಪವಿತ್ರವಾದ ಹಬ್ಬ ಎಂದೇ ಹೆಸರಾಗಿರುವ ವರಮಹಾಲಕ್ಷಿö್ಮÃ ಹಬ್ಬಕ್ಕೆ ಇನ್ನು ಎರಡು ದಿವಸ ಬಾಕಿ ಇರುವಾಗಲೇ ಮಂಗಳವಾರ ಮಾರುಕಟ್ಟೆಯಲ್ಲಿ ಹೂವು ಹಣ್ಣು ಬೆಲೆ ದುಬಾರಿಯಾಗಿದೆ. ಎರಡು ದಿನಗಳ ಮುಂಚಿತವಾಗಿಯೇ ಖರೀದಿಗಾಗಿ ಮಹಿಳೆಯರು ಮುಗಿಬೀಳುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡು ಬಂದಿತು.
ನಾಡಿನಾದ್ಯಂತ ವರಮಹಾಲಕ್ಷಿö್ಮÃ ಹಬ್ಬವನ್ನು ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಭಕ್ತಿ ಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಇದು ಪ್ರಥಮ ಹಬ್ಬವೂ ಆಗಿದೆ. ಸ್ವಾತಂತ್ರö್ಯ ದಿನಾಚರಣೆಯ ಮರುದಿನವೇ ವರಮಹಾಲಕ್ಷಿö್ಮÃ ಹಬ್ಬ ಈ ಬಾರಿ ಬಂದಿರುವುದರಿAದ ಮಾರುಕಟ್ಟೆಯಲ್ಲಿ ಹೂವು ಹಣ್ಣು ಬೆಲೆಗಳು ಗಗನಕ್ಕೆ ಏರಿವೆ.
ವರಮಹಾಲಕ್ಷಿö್ಮÃ ಹಬ್ಬ ಶುಕ್ರವಾರವಾದರೆ ೨ನೇ ಶನಿವಾರ ಮಾರನೇ ದಿನ ಆಗಿರುವುದರಿಂದ ಈ ವಾರದಲ್ಲಿ ಮೂರು ದಿನಗಳು ವಿಶೇಷ ದಿನಗಳಾಗಿದ್ದು, ಹೂವಿಗೆ ಬಾರಿ ಬೇಡಿಕೆಯಾಗಿದೆ. ವರಮಹಾಲಕ್ಷಿö್ಮÃ ಹಬ್ಬ ಆಚರಣೆ ಮಾಡಿದರೆ ಮರುದಿವೇ ಶನಿವಾರ ಆಗಿರುವುದರಿಂದ ೨ನೇ ಶ್ರಾವಣ ಶನಿವಾರವನ್ನು ಆಚರಣೆ ಮಾಡುವಂತಹವರು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದಾರೆ. ವರಮಹಾಲಕ್ಷಿö್ಮÃ ಹಬ್ಬಕ್ಕಾಗಿ ಮನೆಗಳನ್ನು ಸ್ವಚ್ಛತೆ ಮಾಡಿಕೊಂಡಿರುವುದು, ಶ್ರಾವಣವನ್ನು ಹಬ್ಬದ ಮರುದಿನವೇ ಆಚರಣೆ ಮಾಡಿದರೆ ಖರ್ಚು ಕಡಿಮೆ ಬರುತ್ತದೆಂದು ಲೆಕ್ಕಾಚಾರದಲ್ಲಿ ೨ನೇ ಶ್ರಾವಣ ಶನಿವಾರವನ್ನು ಆಚರಣೆ ಮಾಡುತ್ತಿರುವುದರಿಂದ ಸಾಲು ಸಾಲು ಹಬ್ಬಗಳು ಎಂಬAತೆ ಗುರುವಾರ ಸ್ವಾತಂತ್ರö್ಯ ದಿನಾಚರಣೆ, ಶುಕ್ರವಾರ ವರಮಹಾಲಕ್ಷಿö್ಮÃ ಹಬ್ಬ, ಶನಿವಾರ ೨ನೇ ಶ್ರಾವಣ ಹಬ್ಬ ಆಗಿದೆ.
ಮಹಿಳೆಯರು ಭಕ್ತಪೂರ್ವಕವಾಗಿ ತಮ್ಮ ತಮ್ಮ ಮನೆಗಳಲ್ಲಿ ವರಮಹಾಲಕ್ಷಿö್ಮÃ ವ್ರತವನ್ನು ಆಚರಣೆ ಮಾಡುತ್ತಾರೆ. ಈ ಹಿಂದೆ ಬ್ರಾಹ್ಮಣರು ಮತ್ತು ಆರ್ಯವೈಶ್ಯ ಸಮುದಾಯದವರು ಹೆಚ್ಚಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದರು. ಇತ್ತೀಚೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಎಲ್ಲಾ ಸಮುದಾಯಗಳವರು ಈ ಹಬ್ಬವನ್ನು ಪ್ರತಿ ಮನೆಗಳಲ್ಲಿ ಆಚರಣೆ ಮಾಡುವಂತಹ ಪದ್ದತಿಯನ್ನು ಅಳವಡಿಸಿಕೊಂಡಿರುವುದರಿAದ ವರಮಹಾಲಕ್ಷಿö್ಮÃ ಹಬ್ಬವೂ ಒಂದು ವಿಶೇಷ ಹಬ್ಬವಾಗಿ ಪರಿಗಣಿಸಲಾಗಿದೆ.
ಹಬ್ಬದ ಸಾಮಗ್ರಿಗಳ ಬೆಲೆಗಳು ಎಷ್ಟೇ ಗಗನಕ್ಕೇರಿದರೂ ಪ್ರಥಮ ಹಬ್ಬವಾಗಿರುವುದರಿಂದ ಖರೀದಿಯಲ್ಲಿ ಹಿಂದೆ ಮುಂದೆ ನೋಡದೆ ವಿಶೇಷವಾಗಿ ಹೂವು ಹಣ್ಣು ಸಹಿ ಪದಾರ್ಥಗಳನ್ನು ಖರೀದಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಮಂಗಳವಾರ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಮತ್ತು ಹಣ್ಣಿನ ಬೆಲೆಗಳು ಗಗನಕ್ಕೇರಿದ್ದವು. ಸಹಿ ತಿನಿಸುಗಳ ಬೆಲೆಯೂ ಹೆಚ್ಚಾಗಿರುವುದು ಕಂಡುಬAದಿತು.
ಕನಕಾಂಬರ ಬಿಡಿ ಹೂವು ಕೆ.ಜಿ. ೧೫೦೦ ರೂ.ಗಳು, ಮಲ್ಲಿಗೆ ೮೦೦ ರೂ.ಗಳು, ಕಾಕಡ ೧೦೦೦ ರೂ.ಗಳು, ಸೇವಂತಿಗೆ ೩೨೦ ರಿಂದ ೩೫೦ ರೂ.ಗಳು, ಚೆಂಡು ಹೂವು ೪೦ ರಿಂದ ೫೦ ರೂ.ಗಳಿಗೆ ಮಾರಾಟವಾಗುತ್ತಿತ್ತು.
ಹಣ್ಣುಗಳಲ್ಲಿ ಆಪಲ್ ಕೆ.ಜಿ. ಒಂದಕ್ಕೆ ೨೦೦ ರೂ.ಗಳು ದಾಟಿತ್ತು. ಬಾಳೆಹಣ್ಣು ೧೨೦ ರೂ.ಗಳು, ಮೂಸಂಬಿ ೮೦ ರೂ.ಗಳು, ದಾಳಿಂಬೆ ೨೦೦ ರೂ.ಗಳು, ಕಿತ್ತಲೆ ೧೫೦ ರೂ.ಗಳು, ಅನಾನಸ್ ೮೦ ರೂ.ಗಳಿಗೆ ಮಾರಾಟವಾಗುತ್ತಿತ್ತು. ಬುಧವಾರ ಮತ್ತು ಗುರುವಾರ ಹಬ್ಬಕ್ಕೆ ಹತ್ತಿರ ದಿನಗಳು ಇರುವುದರಿಂದ ಇನ್ನೂ ಬೆಲೆಗಳು ಹೆಚ್ಚಾಗುವ ಸಾಧ್ಯತೆಗಳು ಇವೆ. ಈ ಮಧ್ಯೆ ಸಿಹಿ ತಿನಿಸುಗಳು ಸಹ ಮಾಮೂಲಿ ದರಕ್ಕಿಂತ ಶೇ.೧೦ ರಷ್ಟು ಬೆಲೆ ಹೆಚ್ಚಾಗಿರುವುದು ಕಂಡು ಬಂತು.
ಕೋಟ್
ವರಮಹಾಲಕ್ಷಿö್ಮÃ ಹಬ್ಬ ಹೆಣ್ಣುಮಕ್ಕಳಿಗೆ ಪವಿತ್ರವಾದ ಹಬ್ಬವಾಗಿರುವುದರಿಂದ ಬೆಲೆಗಳು ಎಷ್ಟೇ ಹೆಚ್ಚಾದರೂ ಹಬ್ಬವನ್ನು ಆಚರಣೆ ಮಾಡದೆ ಇರುವುದಿಲ್ಲ. ಇದು ಪ್ರಾರಂಭದ ಹಬ್ಬವೂ ಆಗಿರುವುದರಿಂದ ಹೂವಿನ ಬೆಲೆ ಸ್ವಲ್ಪ ಹೆಚ್ಚು ಎನಿಸುತ್ತಿದೆ. ಗ್ರಾಹಕರಿಗೆ ದುಬಾರಿಯಾಗಿದೆ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಮಾರಾಟಗಾರರು ತಮಗೆ ಇಷ್ಟ ಬಂದAತೆ ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾಗಿದೆ.
-ಮಮತಮ್ಮ, ಅರಾಭಿಕೊತ್ತನೂರು.
ಕೋಟ್
ದೊಡ್ಡ ದೊಡ್ಡ ಮಾರುಕಟ್ಟೆಗಳಲ್ಲಿಯೇ ಹಣ್ಣುಗಳ ಬೆಲೆ ಹೆಚ್ಚು ಮಾಡಿದ್ದಾರೆ. ನಾವು ಮಾರುಕಟ್ಟೆಯಲ್ಲಿ ಖರೀದಿಸಿ ಮಾರಾಟ ಮಾಡುತ್ತಿದ್ದೇವೆ. ಬೆಲೆ ಹೆಚ್ಚು ಎನಿಸುತ್ತಿದೆ. ಗ್ರಾಹಕರಿಗೆ ನಾವು ಬೆಲೆ ಹೇಳಲು ಕಷ್ಟವಾಗುತ್ತಿದೆ. ಆದರೆ ವಿಧಿಯಿಲ್ಲ. ನಮಗೆ ಒಂದೊAದು ಬಾರಿ ಕಮೀಷನ್ ಸಿಗದೆ ಅಸಲಿಗೆ ಮಾರಾಟ ಮಾಡಬೇಕಾಗುತ್ತದೆ. ಗ್ರಾಹಕರು ಪರಿಚಯಸ್ಥರು ಬರುತ್ತಾರೆ. ಇರುವ ಬೆಲೆ ಹೇಳಿದರೆ ನಾವು ಕೊಡುವುದು ಇಷ್ಟೇ ಎನ್ನುತ್ತಾರೆ. ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿಯೇ ಹಣ್ಣುಗಳ ಬೆಲೆ ದುಬಾರಿಯಾಗಿದೆ.
-ಮುಸ್ತಫಾ ಅಹ್ಮದ್, ಹಣ್ಣು ವ್ಯಾಪಾರಸ್ಥ, ಕೋಲಾರ.
ಚಿತ್ರ ೧೩ ಕೆ.ಎಲ್.ಆರ್. ೦೩ : ಮಮತಮ್ಮ, ಅರಾಭಿಕೊತ್ತನೂರು ರವರ ಭಾವಚಿತ್ರ
ಚಿತ್ರ ೧೩ ಕೆ.ಎಲ್.ಆರ್. ೦೩ಎ : ಮುಸ್ತಫಾ ಅಹ್ಮದ್, ಹಣ್ಣು ವ್ಯಾಪಾರಸ್ಥ, ಕೋಲಾರ.
ಚಿತ್ರ ೧೩ ಕೆ.ಎಲ್.ಆರ್. ೦೩ಬಿ : ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹೂವನ್ನು ಖರೀದಿಸಲು ಮುಗಿಬಿದ್ದಿರುವ ಗ್ರಾಹಕರು.
ಚಿತ್ರ ೧೩ ಕೆ.ಎಲ್.ಆರ್. ೦೩ಸಿ : ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರು.