ವನ್ಯಪ್ರಾಣಿಗಳ ಹಾವಳಿಯಿಂದ ರೈತರಿಗೆ ತೊಂದರೆ

7ldh3 kona
ರೂಪ್‌ಲೈನ್ ಗ್ರಾಮದ ಸಮೀಪ ಆಗಮಿಸಿದ ಕಾಡುಕೋಣ.
Published on

ಲಿಂಗದಹಳ್ಳಿ: ಭದ್ರಾ ಅಭಯಾರಣ್ಯ ತಣಿಗೆಬೈಲು ವನ್ಯಜೀವಿ ವಿಭಾಗದಲ್ಲಿ ಆನೆ, ಕಾಡುಕೋಣ, ಹುಲಿ, ಚಿರತೆ, ಕಡವೆ, ಜಿಂಕೆ ಮುಂತಾದ ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ರೈತರಿಗೆ ತೊಂದರೆಯಾಗಿದೆ.

ರೈತರು ಬೆಳೆದ ಹಲಸಿನ ಹಣ್ಣು, ಮಾವಿನ ಹಣ್ಣುಗಳನ್ನು ತಿನ್ನುವ ಸಲುವಾಗಿ ಕಾಡಾನೆಗಳು ಗ್ರಾಮಗಳೆಡೆಗೆ ಬರುತ್ತಿವೆ. ಅಭಯಾರಣ್ಯ ಬಿಟ್ಟು ಹೊರಬರಲು ಹೆದರುತ್ತಿದ್ದ ಕಾಡು ಕೋಣಗಳು ಇತ್ತೀಚಿನ ದಿನಗಳಲ್ಲಿ ಗ್ರಾಮಗಳತ್ತ ಬರುತ್ತಿರುವುದರಿಂದ ರೂಪ್‌ಲೈನ್, ಮಂಚೇತವರು, ತಿಮ್ಮನ ಬೈಲು, ಹುಣಸೆಬೈಲು ಮುಂತಾದ ಗ್ರಾಮಗಳ ಜನರು ಮನೆಗಳಿಂದ ಹೊರಬರಲು ಭಯಪಡುವಂತಾಗಿದೆ.

ಕಾಡು ಪ್ರಾಣಿಗಳು ಗ್ರಾಮಗಳತ್ತ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೂಪ್‌ಲೈನ್ ಗ್ರಾಮದ ಚಂದ್ರಶೇಖರ್ ಪಾಟೀಲ್ ಒತ್ತಾಯಿಸಿದ್ದಾರೆ.

ಅನೇಕ ವರ್ಷಗಳಿಂದ ರೂಪ್‌ಲೈನ್ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡು ನಾನು ವಾಸ ಮಾಡುತ್ತಿದ್ದು, ಅನೇಕ ಬಾರಿ ಕಾಡು ಪ್ರಾಣಿಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದೇವೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳು ಗ್ರಾಮಗಳತ್ತ ಬಾರದಂತೆ ಭದ್ರಾ ಅಭಯಾರಣ್ಯದ ಸುತ್ತಲೂ ಟ್ರಂಚ್ ನಿರ್ಮಾಣ ಮತ್ತು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net