

ಮೈಸೂರು: ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದಿಂದ ವಕೀಲರ ಉಪಯೋಗಕ್ಕಾಗಿ ಉಚಿತವಾಗಿ ಕಾನೂನು ಪುಸ್ತಕಗಳ ವಿತರಿಸಲಾಯಿತು.
ಮೈಸೂರು ವಕೀಲರ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಲಾ ಗೈಡ್ ಎಚ್.ಎನ್.ವೆಂಕಟೇಶ್ ಅವರು ಉಚಿತ ಕಾನೂನು ಪುಸ್ತಕಗಳ ವ್ಯವಸ್ಥೆ ಮಾಡಿದ್ದರು.
ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶ ರವೀಂದ್ರ ಹೆಗ್ಡೆ ಮಾತನಾಡಿ, ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರು ಕೊಟ್ಟ ಮಾತಿನಂತೆ ವಕೀಲರಿಗೆ ಉಚಿತ ಕಾನೂನು ಪುಸ್ತಕ ನೀಡಿದ್ದಾರೆ ಎಂದು ತಿಳಿಸಿದರು.
ನ್ಯಾಯಾಧೀಶರಾದ ಪುಟ್ಟಸ್ವಾಮಿ, ಪಿ.ಜೆ ಸೋಮಶೇಖರ್, ಸಾವಿತ್ರಿ, ಶಿವಪುತ್ರ ಕುಜ್ಜಿ, ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಸುಧೀರ್, ಹಿರಿಯ ವಕೀಲರಾದ ಜಿ.ವಿ.ರಾಮಮೂರ್ತಿ ಎಂ.ಡಿ.ಹರೀಶ್ ಕುಮಾರ್ ಹೆಗ್ಡೆ ಇತರರಿದ್ದರು.