

ತರೀಕೆರೆ: ವಕೀಲರಿಗೆ ಕಾನೂನಿನ ಜ್ಞಾನ ಅಪಾರವಾಗಿರಬೇಕು. ಈ ದಿಸೆಯಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಹೇಳಿದರು. ಜೆಎಂಎ್ಸಿ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ, ಕ್ಷಕಿದಾರರಿಗೆ ನ್ಯಾಯ ಕೊಡಿಸುವ ದಿಸೆಯಲ್ಲಿ ಪ್ರಖರ ವಾದ ಮಂಡಿಸಿ ಗೆಲುವು ಸಾಧಿಸಿ ಕೀರ್ತಿ ಸಂಪಾದಿಸಬೇಕು ಎಂದರು. ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಊರ್ಮಿಳಾ, ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರನಾಯ್ಕ, ಉಪಾಧ್ಯಕ್ಷ ಬಿ.ವಿ.ದಿನೇಶ್‌ಕುಮಾರ್, ಕಾರ್ಯದರ್ಶಿ ಬಿ.ಪಿ.ರಾಜಶೇಖರ್, ಹಿರಿಯ ವಕೀಲರಾದ ಎಸ್.ಸುರೇಶ್‌ಚಂದ್ರ, ಜಿ.ಎನ್.ಚಂದ್ರಶೇಖರ್, ಮಲ್ಲೇಗೌಡ, ರವಿ ಶಾನುಭೋಗ್, ಟಿ.ಜೆ.ಅವಿನಾಶ್, ಎನ್.ವೀರಭದ್ರಪ್ಪ, ಶಿವಶಂಕರನಾಯ್ಕ, ಟಿ.ಕೆ.ಜಗದೀಶ್, ಎಚ್.ಸತೀಶ್ ಕುಮಾರ್ ಇತರರಿದ್ದರು.