ವಕೀಲರ ಸಂಘದಿಂದ ಗೃಹ ಸಚಿವರಿಗೆ ಮನವಿ

6-MDG-3P1 layour
ಮೂಡಿಗೆರೆ ವಕೀಲರ ಸಂಘದಿಂದ ಶಿರಸ್ತೇದಾರ್ ಎಂ.ಬಿ.ರಘುಗೆ ಮನವಿ ಸಲ್ಲಿಸಲಾಯಿತು. ಬಿ.ಟಿ.ನಟರಾಜ್, ಕೆ.ಸಿ.ಚಂದ್ರಶೇಖರ್, ರಿಜ್ವಾನ್ ಅಲಿ, ಬಿ.ಎಸ್.ಸುರೇಶ್, ಪ್ರತಾಪ್ ಇತರರಿದ್ದರು.
Published on

ಮೂಡಿಗೆರೆ: ತುಮಕೂರಿನ ವಕೀಲ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ತುಮಕೂರು ನಗರ ಪೊಲೀಸ್ ವೃತ್ತ ನಿರೀಕ್ಷಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೂಡಿಗೆರೆ ವಕೀಲರ ಸಂಘದಿಂದ ಶಿರಸ್ತೇದಾರ್ ಎಂ.ಬಿ.ರಘು ಮೂಲಕ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್ ಮಾತನಾಡಿ, ವಕೀಲರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇಂತಹ ಗೂಂಡಾಗಿರಿಯನ್ನು ವಕೀಲರ ಸಂಘ ಸಹಿಸಿಕೊಳ್ಳುವುದಿಲ್ಲ. ತುಮಕೂರಿನ ವಕೀಲ ರವಿಕುಮಾರ್ ಮಾಡಿದ ತಪ್ಪಾದರೂ ಏನು? ಅವರ ಮೇಲೆ ಸಿಪಿಐ ಹಲ್ಲೆ ನಡೆಸಿದ್ದು ಏಕೆ ಎಂಬುದಕ್ಕೆ ಹಿರಿಯ ಅಧಿಕಾರಿಗಳು ಉತ್ತರ ನೀಡಬೇಕು. ವಿನಾಕಾರಣ ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ವಕೀಲರ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಕೀಲರ ಸಂಘದ ಪದಾಧಿಕಾರಿಗಳಾದ ಕೆ.ಸಿ.ಚಂದ್ರಶೇಖರ್, ರಿಜ್ವಾನ್ ಅಲಿ, ಬಿ.ಎಸ್.ಸುರೇಶ್, ಪ್ರತಾಪ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net