

ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಲ್‌ಟಿ ಅಳವಡಿಕೆಗೆ ತೋಡಿದ್ದ ಗುಂಡಿಗೆ 2 ವರ್ಷದ ಬಾಲಕ ಬಿದ್ದು ಮೃತಪಟ್ಟಿದ್ದಾನೆ.
ಕೋಡಿಪಾಳ್ಯದಲ್ಲಿ ಶೆಡ್‌ನಲ್ಲಿ ನೆಲೆಸಿರುವ ಅಂಬರೀಷ್ ದಂಪತಿ ಪುತ್ರ ವಿನೋದ್‌ಕುಮಾರ್(2) ಮೃತ ಬಾಲಕ. ಕೊಪ್ಪಳ ಮೂಲದ ಅಂಬರೀಷ್ ದಂಪತಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕೆಂಗೇರಿ ಸಮೀಪದ ಕೋಡಿಪಾಳ್ಯದಲ್ಲಿ ಶೆಡ್‌ನಲ್ಲಿ ನೆಲೆಸಿದ್ದರು.
ಅಂಬರೀಷ್ ದಂಪತಿಗೆ ಒಬ್ಬನೇ ಪುತ್ರ ವಿನೋದ್. ಬಿಜಿಎಸ್ ಆಸ್ಪತ್ರೆಯಲ್ಲಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿಕೆಲಸ ಮಾಡುತ್ತಿದ್ದು, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ತಂದೆ ಕೆಲಸಕ್ಕೆ ಹೋಗಿದ್ದು, ತಾಯಿ ಮಗನಿಗೆ ಸ್ನಾನ ಮಾಡಿಸಿ ನಂತರ ತಾನೂ ಸ್ನಾನಕ್ಕೆ ಹೋಗಿದದರು. ಈ ವೇಳೆ ಅಕ್ಕಪಕ್ಕದ ಮಕ್ಕಳ ಜತೆ ಆಟವಾಡುತ್ತಿದ್ದ ವಿನೋದ್, ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಲ್‌ಟಿ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮಕ್ಕಳು ಕೂಗಿಕೊಂಡಾಗ ಸ್ಥಳೀಯರು ಬಂದು ಬಾಲಕನನ್ನು ರಕ್ಷಣೆ ಮಾಡಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಲಿಸದೆ ವಿನೋದ್ ಅಸುನೀಗಿದ್ದಾನೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಉಮೇಶ್ ಎಂಬುವರು 4 ಅಂತಸ್ಥಿನ ಕಟ್ಟಡ ನಿರ್ಮಿಸುದ್ದರು. ಇದಕ್ಕೆ ಲ್‌ಟಿ ಅಳವಡಿಸಲು 6 ಅಡಿ ಗುಂಡಿ ತೋಡಿದ್ದರು. ಇತ್ತೀಚೆಗೆ ಸುರಿದ ಮಳೆ ಇಂದಾಗಿ ನೀರು ತುಂಬಿಕೊಂಡಿತ್ತು. ಯಾರು ಹೋಗದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕ ಮತ್ತು ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.