

ಬೆಂಗಳೂರು: 2 ಲಕ್ಷ ರೂ. ಲಂಚ ಪಡೆಯುವಾಗ ಬಿಎಂಟಿಎ್ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ ಪೋರ್ಸ್(ಬಿಎಂಟಿಎ್) ಇನ್‌ಸ್ಪೆಕ್ಟರ್ ಜಿ.ವಿ.ಅರುಣ್‌ಕುಮಾರ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು.
ಕಾಡುಗೋಡಿಯ ನಿವಾಸಿ ಪರಮೇಶ್ ಅವರ ಪತ್ನಿ ಶ್ರೀದೇವಿ ವಿರುದ್ಧ ಬಿಎಂಟಿಎ್ನಲ್ಲಿ ದಾಖಲಾಗಿದ್ದ ಪ್ರಕರಣದ ಅರ್ಜಿಯನ್ನು ಮುಕ್ತಾಯಗೊಳಿಸಲು ೧೫ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಈ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅರುಣ್‌ಕುಮಾರ್ ತನ್ನ ಸ್ನೇಹಿತನಾದ ನಂದೀಶ್ ಮೂಲಕ ಥಣಿಸಂಧ್ರದ ರಾಷ್ಟ್ರೋತ್ಥಾನ ವೃತ್ತದಲ್ಲಿ ೨ ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಅರುಣ್‌ಕುಮಾರ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.