ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಉಳಿಯುದು ಕಷ್ಟ, ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಬುಧವಾರ ಜೆಡಿಎಸ್ ಬಿಜೆಪಿ ಸಮನ್ವಯ ಸಭೆಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ ಅಭಿವೃದ್ದಿ ಮಾತ್ರ ಶೂನ್ಯ ಈ ಭಾರಿ ರಾಜ್ಯದ ಜನತೆ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಎಂ. ಮಲ್ಲೇಶಬಾಬು ಬುದ್ದಿವಂತ, ಸರಳ, ಸಜ್ಜನಿಕೆಯ ವ್ಯಕ್ತಿ ಈ ಕ್ಷೇತ್ರ ಮೊಮ್ಮಗನು ಸಹ ಆಗಿದ್ದಾನೆ. ಈ ಭಾರಿ ಕ್ಷೇತ್ರದ ಜನತೆ ಪಕ್ಷಬೇದವನ್ನು ಮರೆತು ಸ್ಥಳೀಯ ವ್ಯಕ್ತಿಯಾದ ಮಲ್ಲೇಶ್‌ಬಾಬುರವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಏ.೪ ರ ಗುರುವಾರ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ನಾಮಪತ್ರ ಸಲ್ಲಿಸಲಿದ್ದಾರೆ. ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಮೆರವಣಿಗೆ ಮುಖಾಂತರ ಮೆಕ್ಕೆ ಸರ್ಕಾಲ್‌ಗೆ ಆಗಮಿಸಿ ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸುಮಾರು ನಾಲ್ಕು ಸಾವಿರ ಜನ ಭಾಗವಹಿಸಬೇಕೆಂದರು.
ಈ ಭಾರಿ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಹಾಗೆಯೇ ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿದೆ. ಕುಮಾರಸ್ವಾಮಿಗೆ ಕೇಂದ್ರ ಮಟ್ಟದಲ್ಲಿ ಒಳ್ಳೆಯ ಉನ್ನತ ಸನ್ಮಾನ ಸಿಗಲಿದೆ. ಏ.೫ ಮತ್ತು ೬ ರಿಂದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಮಾಡಲಾಗುವುದು ಹಾಗೆಯೇ ೧೨ ಮತ್ತು ೧೩ ರಂದು ೭ ಹೋಬಳಿಗಳಲ್ಲಿ ಕಾರ್ಯಕರ್ತರ ಬೃಹತ್ ಕಾರ್ಯಕರ್ತರ ಸಬೆಗಳನ್ನು ಏರ್ಪಡಿಸಿದ್ದೇವೆ. ಈ ಸಭೆಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್‌ಬಾಬು ಭಾಗವಹಿಸಲಿದ್ದಾರೆ. ಈ ಒಂದು ಸಭೆಗಳಿಗೆ ಈ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ|| ಕೆ.ಎನ್. ವೇಣುಗೋಪಾಲ್ ಮಾತನಾಡಿ ಜಾತಿ ಜಾತಿಗಳನ್ನು ಹೊಡೆದು ಕಾಂಗ್ರೇಸ್ ಸರ್ಕಾರ ಕುತಂತ್ರ ರಾಜ ಕಾರಣ ಮಾಡುತ್ತಿದೆ. ಅದಕ್ಕೆ ಸಾಕ್ಷಿಯೇ ಈ ಲೋಕಸಭಾ ಕ್ಷೇತ್ರವೇ ಉದಾಹರಣೆಯಾಗಿದೆ. ದಲಿತರನ್ನು ಎಡಗೈ ಬಲಗೈ ಎಂದು ವಿಂಗಡಿಸಿದ್ದಾರೆ ರಾಜ್ಯದ ಅರ್ಥಿಕ ಪರಿಸ್ಥಿತಿ ನೋಡಿದರೆ ದಿವಾಳಿ ಎದ್ದು ಹೋಗಿದೆ ಮಾತು ಎತ್ತಿದ್ದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಾರೆ. ಈ ಭಾರಿ ರಾಜ್ಯದ ಜನತೆ ಕಾಂಗ್ರೇಸ್ ಸರ್ಕಾರಕ್ಕೆ ಬುದ್ದಿ ಕಲಿಸಲಿದ್ದಾರೆ ಎಂದರು.
ರಾಜ್ಯದಿಂದ ೨೮ಕ್ಕೆ ೨೮ ಕ್ಷೇತ್ರವನ್ನು ಗೆಲ್ಲಿಸಿ ನರೇದ್ರ ಮೋದಿರವರ ಕೈ ಬಲ ಪಡಿಸುತ್ತೇವೆ. ಕಳೆದ ಬಾರಿಯು ಬಿಜೆಪಿ ಯಡಿಯೂರಪ್ಪ ಮತ್ತು ಬಸವರಾಜ್‌ಬೊಮ್ಮಾಯಿ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಆಡಳಿತವೇ ಮಾದರಿಯಾಗಿ ರಾಷ್ಟದ ಪ್ರಧಾನ ಮಂತ್ರಿ ಮತ್ತು ಮಾಜಿ ಪ್ರಧಾನ ಮಂತ್ರಿ ಒಟ್ಟಿಗೆ ತೆಗೆದುಕೊಂಡಿರುವ ನಿರ್ಧಾರ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ನಮ್ಮ ಎನ್‌ಡಿಎ ಅಭ್ಯರ್ಥಿ ಎಂ. ಮಲ್ಲೇಶ್‌ಬಾಬು ಗೆಲ್ಲಲಿದ್ದಾರೆ. ಕಾರ್ಯಕರ್ತರು ಈಗಿನಿಂದಲೇ ಸಕ್ರಿಯವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷಣಿ ಗಾಯಿತ್ರಿಮುತ್ತಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್ ಮುಖಂಡರಾದ ಉಪ್ಪರಪಲ್ಲಿ ನಾರಾಯಣಸ್ವಾಮಿ, ಇ. ಶಿವಣ್ಣ, ಶಿವಪುರ ಗಣೇಶ್, ಪುಲುಶಿವಾರೆಡ್ಡಿ, ಲಕ್ಷö್ಮಣ್‌ಗೌಡ, ಗೊರವಿಮಾಕಲಹಳ್ಳಿ ಶ್ರೀನಿವಾಸ್, ದಳಸನೂರು ಶ್ರೀನಿವಾಸಗೌಡ, ಕಲ್ಲೂರು ಎನ್.ವಿ. ಶ್ರೀನಾಥಬಾಬು, ಶ್ಯಾಗೂತ್ತೂರು ಆರ್. ನಾರಾಯಣಸ್ವಾಮಿ, ಹೊದಲಿ ನಾರಾಯಣಸ್ವಾಮಿ, ಯಲ್ದೂರು ನಾಗಭೂಷಣ್, ನಿಶಾಂತ್‌ರೆಡ್ಡಿ, ಯುವ ಮುಖಂಡ ಗುಮ್ಮರೆಡ್ಡಿಪುರ ಶ್ರೀನಾಥ್, ನಾಗಸಂಕೀತ್, ಲಕ್ಷö್ಮಣ್‌ರೆಡ್ಡಿ ಇನ್ನೀತರರು ಉಪಸ್ಥಿತರಿದ್ದರು.
ಚಿತ್ರ ೦೩ ಕೆ.ಎಲ್.ಆರ್. ೦೪ : ಶ್ರೀನಿವಾಸಪುರದ ಜೆಡಿಎಸ್ ಕಛೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡುತ್ತಿರುವುದು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ ಇದ್ದರು.