ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

Published on

ನಂಜನಗೂಡು: ತಾಲೂಕಿನ ಬದನವಾಳು ಗ್ರಾಮದ ಬಳಿ ಮಂಗಳವಾರ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.


ಚಾಮರಾಜನಗರದ ಪೌರಕಾರ್ಮಿಕ ಕಾಲನಿ ನಿವಾಸಿಗಳಾದ ವಿಜಯ್(21) , ಮಾದೇಶ(21) ಮೃತಪಟ್ಟವರು. ಮತ್ತೊಬ್ಬ ವಿಶ್ವ (20) ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಕೆಲಸದ ನಿಮಿತ್ತ ವಿಜಯ್, ಮಾದೇಶ, ಮತ್ತು ವಿಶ್ವ ಒಂದೇ ಬೈಕ್‌ನಲ್ಲಿ ಮೈಸೂರಿಗೆ ತೆರಳಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿ ವಾಪಸ್ ಚಾಮರಾಜನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಮರಾಜನಗರ ಕಡೆಯಿಂದ ಬಂದ ಲಾರಿ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವಿಜಯ್ ಸ್ಥಳದಲ್ಲೇ ಮೃತಪಟ್ಟರೆ, ಮಾದೇಶ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಾಳು ವಿಶ್ವನ ತಲೆ ಮತ್ತು ಕಾಲಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ ಎಂದು ಕವಲಂದೆ ಪೊಲೀಸ್ ಠಾಣೆ ಅಪರಾಧ ವಿಭಾಗದ ಎಸ್‌ಐ ಇಶ್ರಥ್ ಬೇಗಂ ತಿಳಿಸಿದ್ದಾರೆ. ಕವಲಂದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net