

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಗಳಿಸಬಹುದು ಎಂದು ವೃದ್ಧೆಯೊಬ್ಬರಿಗೆ ಆಸೆ ತೋರಿಸಿ 29.4 ಲಕ್ಷ ರೂ. ವಂಚಿಸಲಾಗಿದೆ. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿ ಹಣ ಕಳೆದುಕೊಂಡವರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ದಿನ ಲಾಭ ಗಳಿಸಬಹುದು ಎಂಬ ಸಂದೇಶದಿಂದ ಸಂತೋಷಗೊಂಡ ವೃದ್ಧೆ, ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 29.4 ಲಕ್ಷ ರೂ. ಹಣವನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು, ಬಳಿಕ ಲಾಭ ಬಾರದೇ ಇದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.