ಲಾಟರಿಯಲ್ಲಿ ರಾಜೇಶ್ವರಿಗೆ ಒಲಿದ ಅದೃಷ್ಟ

04 HDK 02
ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶೈಲೇಂದ್ರಕುಮಾರ್, ಉಪಾಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆಯಾದರು.
Published on

ಎಚ್.ಡಿ.ಕೋಟೆ: ತಾಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶೈಲೇಂದ್ರಕುಮಾರ್, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತೆ ರಾಜೇಶ್ವರಿ ಆಯ್ಕೆಯಾದರು.

ಪಂಚಾಯಿತಿಯಲ್ಲಿ 24 ಸದಸ್ಯ ಬಲವಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಲಾಗಿತ್ತು. ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೈಲೇಂದ್ರ ಕುಮಾರ್ 13 ಮತ ಪಡೆದರೆ, ಪ್ರತಿಸ್ಪರ್ಧಿ ಸವಿತಾ 11 ಮತ ಪಡೆದು ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತೆಯಾಗಿ ಸವಿತಾ, ಜಾ.ದಳ ಬೆಂಬಲಿತೆಯಾಗಿ ರಾಜೇಶ್ವರಿ ನಾಮಪತ್ರ ಸಲ್ಲಿಸಿದ್ದರು. ಮತದಾನದ ವೇಳೆ ಕಾಂಗ್ರೆಸ್ ಬೆಂಬಲಿತರ ಪೈಕಿ ಒಬ್ಬ ಸದಸ್ಯ ಜಾ.ದಳದ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿ ಮತದಾನ ಮಾಡಿದ ಪರಿಣಾಮ ಇಬ್ಬರಿಗೂ 12 ಮತ ಬಂತು. ಬಳಿಕ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಾಗ ರಾಜೇಶ್ವರಿ ಅವರಿಗೆ ಅದೃಷ್ಟ ಒಲಿಯಿತು.

ಚುನಾವಣಾಧಿಕಾರಿಯಾಗಿ ಗೋವಿಂದನಾಯ್ಕ ಕಾರ್ಯ ನಿರ್ವಹಿಸಿದರು. ಪಿಡಿಒ ಮೋಹನ್, ಸದಸ್ಯರಾದ ಪುಟ್ಟಮ್ಮ, ಬಿ.ಜಿ.ಸತೀಶ್‌ಕುಮಾರ್, ಪ್ರಕಾಶ್, ಕಾಳಮ್ಮ, ಸುಶೀಲಾ, ಆರ್.ಅಭಿಲಾಷ, ಕುಮಾರ್, ಪ್ರಭಾಕರ್, ನಂಜಪ್ಪ, ಮಂಜುಳಾ, ಬಸವರಾಜು, ಅಮ್ಮಣ್ಣಮ್ಮ, ಸವಿತಾ, ನಾಗೇಶ್, ನಾಗರಾಜು, ಶಿವಲಿಂಗಯ್ಯ, ಸೂರ್ಯ, ಕಲಾವತಿ, ಕಾಳಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net