ಉಡುಪಿ: ಕಳೆದ ಒಂದು ತಿಂಗಳಿನಿಂದ ಮುಚ್ಚಿರುವ ಹೋಟೆಲ್ ದ್ವಾರದಲ್ಲಿ ಕುಂಬಳಕಾಯಿ ಬಳ್ಳಿ ಸೊಂಪಾಗಿ ಬೆಳೆದಿದ್ದು, ನಾಮಫಲಕದಲ್ಲಿ ಗೋಚರಿಸಿರುವ ಲಾಕ್ಡೌನ್ ಕುಂಬಳಕಾಯಿ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಉಡುಪಿ ರಥಬೀದಿಯಲ್ಲಿರುವ ಮಿತ್ರಸಮಾಜ ಹೋಟೆಲ್ ನಾಮಫಲಕದ ಸುತ್ತ ಆವರಿಸಿಕೊಂಡ ಬಳ್ಳಿಯಲ್ಲಿ ಕುಂಬಳಕಾಯಿ ಮೂಡಿ ಬಂದಿದೆ.
ಕರೊನಾ ಲಾಕ್ ಡೌನ್ ಕಾರಣದಿಂದ ಕಳೆದ ಅನೇಕ ದಿನಗಳಿಂದ ಹೋಟೆಲ್, ಅಂಗಡಿಗಳ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಇದಲ್ಲದೆ ತೌಕ್ತೆ, ಯಾಸ್ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಪೂರ್ವ ಹಂಗಾಮಿನಲ್ಲಿ ಕುಂಬಳಕಾಯಿ ಬಳ್ಳಿ ಸೊಂಪಾಗಿ ಬೆಳೆದು ಹತ್ತಾರು ಹೂವು, ಕಾಯಿ ಬಿಟ್ಟು ಗಮನಸೆಳೆಯುತ್ತಿದೆ.