ಲಾಂಗ್‌ನಲ್ಲಿ ಕೇಕ್ ಕತ್ತರಿಸಿದ್ದವನ ಬಂಧನ

Crime Logo
Published on

ಜನ್ಮದಿನದ ಸಂಭ್ರಮದಲ್ಲಿ ಗೌಸಿಯಾನಗರದ ಯುವಕ ತಬ್ರೇಜ್ ಲಾಂಗ್‌ನಲ್ಲಿ ಕೇಕ್ ಕತ್ತರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಜನವರಿ 2 ರಂದು ತನ್ನ ಸ್ನೇಹಿತರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ಲಾಂಗ್‌ನಿಂದ ಕೇಕ್ ಕತ್ತರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಬಳಿಕ ಈ ಬಗ್ಗೆ ಈ ಮಾಹಿತಿ ಅರಿತ ಉದಯಗಿರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ವಿಡಿಯೋ ಅಪ್ ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಯಾವುದೇ ಪರವಾನಗಿ ಇಲ್ಲದೆ ಮಾರಕಾಸ್ತ್ರ ಹೊಂದಿರುವುದು ಅಪರಾಧವಾಗುತ್ತದೆ ಎಂದು ಪರಿಗಣಿಸಿದ ಉದಯಗಿರಿ ಪೊಲೀಸರು ತಬ್ರೇಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net