ಲಸಿಕೆ ತಾಯಿ ಹಾಲಿನಷ್ಟೇ ಮಹತ್ವದ್ದು

CTD--00002
Published on

ಚಿತ್ರದುರ್ಗ: ಮಕ್ಕಳಿಗೆ ನೀಡುವ ಲಸಿಕೆಗಳು ತಾಯಿ ಎದೆ ಹಾಲಿನಷ್ಟೇ ಮಹತ್ವದ್ದಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ.ಗಿರೀಶ್ ಹೇಳಿದರು. ನಗರದ ಗೋಪಾಲಪುರ ರಸ್ತೆಯ ರಾಮದಾಸ್ ಕಾಂಪೌಂಡ್‌ನ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಪ್ರತಿ ವಾರ್ಡ್‌ನಲ್ಲೂ ಪ್ರತಿ ಮಂಗಳವಾರ ಮತ್ತು ಗುರುವಾರ ಲಸಿಕೆ ಹಾಕಲಾಗುತ್ತದೆ. ಆಶಾ ಕಾರ‌್ಯಕರ್ತೆಯರು ಪಾಲಕರಿಗೆ ಲಸಿಕಾ ದಿನಾಂಕಗಳನ್ನು ಪೂರ್ವದಲ್ಲೇ ತಿಳಿಸುತ್ತಾರೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ತಾಲೂಕು ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯನಮ್ಮ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೂಪಾ, ಮಂಜುಳಾ, ನೇತ್ರಾವತಿ, ನಸೀಮಾಬಾನು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net