ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ

flower
ಮಾರಟಕ್ಕೆ ಇಟ್ಟಿರುವ ಹೂವು
Published on

ನಗರದ ಅವಧೂತ ದತ್ತ ಪೀಠ, ಶ್ರಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ಒಂದು ಸಾವಿರ ಭಕ್ತಾದಿಗಳಿಂದ 10 ಬಾರಿ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಹಮ್ಮಿಕೊಳ್ಳಲಾಗಿದೆ.

ಆಶ್ರಮದ ನಾದಮಂಟಪದಲ್ಲಿ ಜುಲೈ 18ರ ಬೆಳಗ್ಗೆ 10ರಿಂದ 1ಗಂಟೆ ವರೆಗೆ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕೋಟಿ ಕುಂಕುಮಾರ್ಚನೆ ಮಾಡಲು ಸಂಕಲ್ಪಿಸಲಾಗಿದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಸಂಕಲ್ಪದಂತೆ ಕಾರ್ಯಕ್ರಮಗಳು ನಡೆಯಲಿದೆ.

ಮಹಾಲಕ್ಷ್ಮೀ ಸ್ವರೂಪರಾದ ಸ್ತ್ರೀಯರಿಗೆ ದೀರ್ಘ ಸೌಮಾಂಗಲ್ಯ ಭಾಗ್ಯ ದೊರಕಲಿ, ಮಹಾವಿಷ್ಣು ಸ್ವರೂಪರಾದ ಪುರುಷರಿಗೆ ಆಯಸ್ಸು, ಅಭಿವೃದ್ಧಿ ಆಗಲಿ ಎಂಬ ಸಂಕಲ್ಪದೊಂದಿಗೆ ಶ್ರೀಗಳು ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಭಕ್ತರು ಈ ಮಹಾ ಪಾರಾಯಣದಲ್ಲಿ ಪಾಲ್ಗೊಳ್ಳಬಹುದು. ಪೂಜೆಯ ನಂತರ ಮಧ್ಯಾಹ್ನ ಅನ್ನಪ್ರಸಾದ ಇರಲಿದೆ ಎಂದು ಅವಧೂತ ದತ್ತಪೀಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net